Advertisement

ವಾರಾಂತ್ಯ ಕರ್ಫ್ಯೂಗೆ ಉತ್ತಮ ಬೆಂಬಲ

04:47 PM Jan 09, 2022 | Team Udayavani |

ಬಳ್ಳಾರಿ: ಹೆಚ್ಚುತ್ತಿರುವ ಕೋವಿಡ್‌ ಮೂರನೇಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವಿಧಿ ಸಿರುವ “ವೀಕೆಂಡ್‌ ಕರ್ಫ್ಯೂ’ಗೆಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಸಾರಿಗೆ ಬಸ್‌, ಆಟೋ, ಸರಕು ಸಾಗಾಣಿಕೆವಾಹನ, ಬೇಕರಿ, ಹಣ್ಣು, ಕಿರಾಣಿ, ಔಷಧಮಳಿಗೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲಮಳಿಗೆಗಳು ಬಂದ್‌ ಆಗಿದ್ದವು.

Advertisement

ಬಹುತೇಕಜನದಟ್ಟಣೆಯೂ ಕಡಿಮೆಯಾಗಿತ್ತು.ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿಪೊಲೀಸ್‌ ಇಲಾಖೆ ಶುಕ್ರವಾರ ನಗರದಪ್ರಮುಖ ವೃತ್ತ, ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ರಸ್ತೆಗಳನ್ನು ಬಂದ್‌ ಮಾಡಿಸಂಚಾರ ಸ್ಥಗಿತಗೊಳಿಸಲಾಗಿದೆ. ಗಡಗಿಚನ್ನಪ್ಪ ವೃತ್ತ, ಬ್ರೂಸ್‌ಪೇಟೆ ಪೊಲೀಸ್‌ಠಾಣೆ ವೃತ್ತ, ಮೋತಿ ವೃತ್ತ, ಎಪಿಎಂಸಿ ರಸ್ತೆ,ಎಸ್‌ಪಿ ವೃತ್ತ ಸೇರಿ ಬಹುತೇಕ ವೃತ್ತಗಳಲ್ಲಿಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು.

ಇದನ್ನು ಬೆಳಗಿನ ಜಾವವೇ ಗಮನಿಸಿದಜನರಲ್ಲಿ ಎರಡು ದಿನಗಳ ಕಾಲ ಕರ್ಫ್ಯೂಖಚಿತಪಡಿಸಿದೆ. ಇದರಿಂದ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಇತ್ತಾದರೂಪ್ರಯಾಣಿಕರ ಕೊರತೆ ಕಾಡುತ್ತಿತ್ತು. ಬಸ್‌ಗಳು ಸಹ ಹೆಚ್ಚಾಗಿ ರಸ್ತೆಗಿಳಿಯದೆ ನಗರದಹೊಸ ಬಸ್‌ ನಿಲ್ದಾಣ ಬಸ್‌ಗಳಿಲ್ಲದೇ ಬಿಕೋಎನ್ನುತ್ತಿತ್ತು. ಆಟೋಗಳ ಸಂಖ್ಯೆಯೂಬಹುತೇಕ ಕಡಿಮೆಯಾಗಿತ್ತು. ಪೆಟ್ರೋಲ್‌ಬಂಕ್‌ಗಳು ತೆರೆದಿದ್ದವು.

ಚಿತ್ರಮಂದಿರಗಳುಪ್ರದರ್ಶನಗಳನ್ನು ಸ್ಥಗಿತಗೊಳಿಸಿದ್ದವು.ನಗರದ ಪ್ರಮುಖ ಬೆಂಗಳೂರು ರಸ್ತೆಯಲ್ಲಿಬಹುತೇಕ ವಾಣಿಜ್ಯ ಮಳಿಗೆಗಳು ಬಂದ್‌ಆಗಿದ್ದವು. ಕಿರಾಣಿ, ಹಣ್ಣಿನ ಬಂಡಿಗಳು,ಅಂಗಡಿಗಳು ತೆರೆದಿತ್ತಾದರೂ, ಗ್ರಾಹಕರಕೊರತೆ ಕಾಡುತ್ತಿತ್ತು. ಇನ್ನು ಬಟ್ಟೆ,ಚಿನ್ನಾಭರಣ ಸೇರಿ ಇನ್ನಿತರೆ ವಾಣಿಜ್ಯಮಳಿಗೆಗಳು, ಬಾರ್‌, ರೆಸ್ಟೋರೆಂಟ್‌ಗಳು,ಹೊಟೇಲ್‌ಗ‌ಳು, ಟೀ ಸ್ಟಾಲ್‌ಗ‌ಳು ಬಂದ್‌ಆಗಿದ್ದವು. ಎಪಿಎಂಸಿಯಲ್ಲೂ ಕಿರಾಣಿಅಂಗಡಿಗಳನ್ನು ಹೊರತುಪಡಿಸಿ ಬಹುತೇಕಮಳಿಗೆಗಳು ಬಂದ್‌ ಆಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next