ಬಳ್ಳಾರಿ: ನಗರದ ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ರೈತರು ಎದುರಿಸುತ್ತಿರುವಕುಂದು ಕೊರತೆಗಳ ಬಗ್ಗೆ ಎಪಿಎಂಸಿ ಅಧ್ಯಕ್ಷ ಬಿ.ಪಿ. ಉಮೇಶಕುಮಾರ್‌ಮತ್ತು ಕಾರ್ಯದರ್ಶಿಗಳೊಂದಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿಯವರು ಗುರುವಾರ ಚರ್ಚಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರೈತರ ಕೃಷಿ ಉತ್ಪನ್ನಗಳನ್ನು ಹೊತ್ತುತರುವ ಲಾರಿ, ಆಟೋಗಳಿಗೆ ಶುಲ್ಕವಿಧಿಸಲಾಗುತ್ತದೆ. ಈ ಕುರಿತು ಹಲವುಗೊಂದಲಗಳು ಇದ್ದು, ಅವುಗಳನ್ನು ಸ್ಪಷ್ಟಪಡಿಸಬೇಕಾಗಿದೆ. ಎಪಿಎಂಸಿಯಲ್ಲಿಧಾನ್ಯಗಳನ್ನು ಒಣಗಿಸುವಾಗ ದನಗಳ ಕಾಟ ಹೆಚ್ಚಾಗಿದೆ.
ಕೃಷಿ ಉತ್ಪನ್ನದೊಂದಿಗೆ ಬಂದರೈತರಿಗೆ ತಂಗಲು ಸೂಕ್ತ ಸೌಲಭ್ಯಗಳಿಲ್ಲದಕುರಿತು ಅಧ್ಯಕ್ಷ ಉಮೇಶಕುಮಾರ್,ಕಾರ್ಯದರ್ಶಿಗಳ ಗಮನಕ್ಕೆಐನಾಥರೆಡ್ಡಿಯವರು ತಂದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷಉಮೇಶಕುಮಾರ್ ಅವರು, ರಾಜ್ಯಸರ್ಕಾರ ಮಾರುಕಟ್ಟೆ ಶುಲ್ಕವನ್ನುಕಡಿತಗೊಳಿಸಿದೆ.
ಇದರಿಂದ ಎಪಿಎಂಸಿಗೆಸಂಪನ್ಮೂಲದ ಕೊರತೆ ಎದುರಾಗಿದ್ದು,ಅಭಿವೃದ್ಧಿ ಕುಂಠಿತವಾಗಿದೆ. ಹಾಗಾಗಿವ್ಯಾಪಾರಸ್ಥರ ಲಾರಿ, ಆಟೋಗಳಿಗೆ ಶುಲ್ಕವಿಧಿಸಲಾಗುತ್ತಿದೆ. ಮಾರುಕಟ್ಟೆ ನಿರ್ವಹಣೆಗೆಇದು ಅನಿವಾರ್ಯವೂ ಆಗಿದೆ ಎಂದವರು ವಿವರಿಸಿದ್ದಾರೆ.
ಈ ವೇಳೆ ಎಪಿಎಂಸಿ ನಿರ್ದೇಶಕಕೆ.ತಿಮ್ಮಾರೆಡ್ಡಿ, ಬಾಬು, ಬುಡಾಅಧ್ಯಕ್ಷ ಪಿ.ಪಾಲಣ್ಣ, ರೈತ ಮೋರ್ಚಾನಗರಾಧ್ಯಕ್ಷ ಟಿ.ಸತ್ಯನಾರಾಯಣ,ಪ್ರಧಾನ ಕಾರ್ಯದರ್ಶಿ ಕೆ.ಪ್ರಶಾಂತ ರೆಡ್ಡಿ,ಕೆ.ನಾಗರಾಜ, ರೈತ ಮೋರ್ಚಾ ನಗರಉಪಾಧ್ಯಕ್ಷ ಮಾಧವ ರೆಡ್ಡಿ, ಸದಸ್ಯರಾದತಿಪ್ಪೇಸ್ವಾಮಿ, ರಾಘವೇಂದ್ರರೆಡ್ಡಿ,ರಾಮು ಮತ್ತು ರೈತ ಮುಖಂಡರಾದಕೆ.ಗುರುಮೂರ್ತಿ ಬಸವ ಹಾಗೂಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತಮಂಡಳಿಯವರು ಇದ್ದರು.