ಬಳ್ಳಾರಿ: ಮೂರನೇ ವಾರ್ಡ್‌ಗೆ ಮೂಲಸೌಲಭ್ಯಗಳನ್ನುಕಲ್ಪಿಸಬೇಕು. ಸಮಸ್ಯೆ ಬಗ್ಗೆ ಗಮನ ಸೆಳೆದರೂನಿರ್ಲಕ್ಷéವಹಿಸುತ್ತಿರುವ ಪಾಲಿಕೆ ಆಯುಕ್ತರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್ ನೇತೃತ್ವದಲ್ಲಿಸ್ಥಳೀಯ ನಿವಾಸಿಗಳು ರಾಸ್ತಾರೋಕೊ ನಡೆಸಿದರು.ನಗರದ ಬಂಡಿಮೋಟ್ ಮುಖ್ಯರಸ್ತೆಯನ್ನುಬಂದ್ ಮಾಡಿದ ಪ್ರತಿಭಟನಾಕಾರರು ಪಾಲಿಕೆಆಯುಕ್ತರು, ಅ ಧಿಕಾರಿಗಳ ವಿರುದ್ಧ ವಿವಿಧಘೋಷಣೆಗಳನ್ನು ಕೂಗಿದರು.
ಕೂಡಲೇ ಸ್ಥಳಕ್ಕೆಆಗಮಿಸಿ ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಬೇಕುಎಂದು ಪಟ್ಟು ಹಿಡಿದರು. ನೇತೃತ್ವವಹಿಸಿದ್ದಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್‌ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಮೂರನೇ ವಾರ್ಡ್‌ನಲ್ಲಿ ಕೆಲ ಸಮಸ್ಯೆಗಳು ಹಲವುದಿನಗಳಿಂದ ಕಾಡುತ್ತಿವೆ. ಒಳಚರಂಡಿ ಸೌಲಭ್ಯವಿಲ್ಲದೆಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮನೆಗಳ ಮುಂದೆ ಚಿಕ್ಕ ಚಿಕ್ಕ μಟ್ ಕುಣಿಗಳನ್ನುಮಾಡಿಕೊಂಡಿರುವ ಸ್ಥಳೀಯ ನಿವಾಸಿಗಳು,ಅವು ಭರ್ತಿಯಾಗುತ್ತಿದ್ದಂತೆ ಆ ಕೊಚ್ಚೆ ನೀರನ್ನುಸ್ವತಃ ತಾವೇ ಡಬ್ಬಿಗಳಲ್ಲಿ ತುಂಬಿಕೊಂಡುಹೋಗಿ ತೆರೆದ ಚರಂಡಿಗಳಲ್ಲಿ ಚೆಲ್ಲುತ್ತಿದ್ದಾರೆ.ಹಾಗಾಗಿ ಒಳಚರಂಡಿ ಸೌಲಭ್ಯವನ್ನು ಮೊದಲಆದ್ಯತೆಯಾಗಿ ಪರಿಗಣಿಸಿ ನಿರ್ಮಿಸಬೇಕೆಂದುಪಾಲಿಕೆ ಆಯುಕ್ತರಿಗೆ ಎರಡು ಬಾರಿ ಮನವಿಸಲ್ಲಿಸಿದರೂ ಕ್ರಮಕೈಗೊಳ್ಳದೆ ನಿರ್ಲಕ್ಷÂವಹಿಸಿದ್ದಾರೆಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಪಾಲಿಕೆ ಎಕ್ಸಿಕ್ಯೂಟಿವ್‌ಇಂಜಿನಿಯರ್ ಖಾಜಾ ಮೊಹಿನುದ್ದೀನ್‌ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.ಪಾಲಿಕೆ ಸದಸ್ಯ ಮುಲ್ಲಂಗಿ ನಂದೀಶ್‌ಕುಮಾರ್,ಪರ್ವಿನ್‌ಬಾನು, ಕುಮಾರ್, ರಬ್ಟಾನಿ ಬಾಷಾ,ಸಿದ್ದಿ, ರಾಮಾಂಜಿನಿ, ಮುಲ್ತಾನಿ, ಕಲೀಂ, ಇದ್ರೀಸ್,ಗೆ„ಬು, ಹುಸ್ತಾದ್ ಇದ್ದರು.