ಬಳ್ಳಾರಿ: ಮುಖ್ಯಮಂತ್ರಿಗಳಆದೇಶದಂತೆ ಅಕಾಲಿಕ ಮಳೆಯಿಂದನಷ್ಟಕ್ಕೀಡಾಗಿರುವ ಬೆಳೆಗಳ ಪರಿಹಾರಕ್ಕಾಗಿರೈತರಿಂದ ಡಿ.21ರವರೆಗೆ ಅರ್ಜಿಗಳನ್ನುಸ್ವೀಕರಿಸಬೇಕು ಎಂದು ತುಂಗಭದ್ರಾ ರೈತಸಂಘವು ಆಗ್ರಹಿಸಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸಂಘದ ಸದಸ್ಯರು, ಬಳ್ಳಾರಿ ಜಿಲ್ಲೆಯಲ್ಲಿಅಕಾಲಿಕ ಮಳೆಗೆ 2.65 ಲಕ್ಷ ಎಕರೆ ಭತ್ತ,1.54 ಲಕ್ಷ ಎಕರೆ ಮೆಣಸಿನಕಾಯಿ, 1.10ಲಕ್ಷ ಎಕರೆ ಹತ್ತಿ ಬೆಳೆ ಸೇರಿದಂತೆ ಇನ್ನಿತರೆಬೆಳೆಗಳು ನಷ್ಟವಾಗಿ ರೈತರು ಸಂಕಷ್ಟದಪರಿಸ್ಥಿತಿ ಎದುರಿಸುತ್ತಿದ್ದಾರೆ. ಖರ್ಚುಮಾಡಿ ಸಹ ಕೈಗೆ ಬಾರದಂತಾಗಿದೆ.ಸಾಲದ ಸುಳಿಗೆ ಸಿಲುಕುವಂತಾಗಿದೆ.
ಇಂತಹ ಸಂದರ್ಭದಲ್ಲಿ ರೈತರು ಬೆಳೆನಷ್ಟ ಪರಿಹಾರದ ಅರ್ಜಿಗಳನ್ನುನೀಡಲು ಹೋದರೆ, ಸಂಬಂಧಪಟ್ಟ ಕೈಷಿ,ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ವೀಕರಿಸದೆ ನಿಗದಿತ ಅವಧಿಮುಗಿದಿದೆ ಎಂದು ಹೇಳುತ್ತಿದ್ದಾರೆ. ಅದುಸರಿಯಲ್ಲ. ಮುಖ್ಯಮಂತ್ರಿಗಳು ಡಿ.21ರವರೆಗೂ ರೈತರಿಂದ ಬೆಳೆ ನಷ್ಟ ಪರಿಹಾರದಅರ್ಜಿಗಳನ್ನು ಸ್ವೀಕರಿಸುವಂತೆ ಆದೇಶಹೊರಡಿಸಿದ್ದಾರೆ. ಹಾಗಾಗಿ ಅಧಿಕಾರಿಗಳುರೈತರಿಂದ ಅರ್ಜಿಗಳನ್ನು ಸ್ವೀಕರಿಸಬೇಕುಎಂದು ಸಂಘವು ಒತ್ತಾಯಿಸಿದೆ. ಬೆಳೆನಷ್ಟ ಪರಿಹಾರವನ್ನು ಒಬ್ಬ ರೈತನಿಗೆ5 ಎಕರೆವರೆಗೆ ಮಾತ್ರ ಎಕರೆಗೆ 5400 ರೂ.ಗಳಂತೆ ನೀಡುತ್ತಿರುವ ಸರ್ಕಾರದ ಕ್ರಮಸರಿಯಲ್ಲ. ನಷ್ಟವಾಗಿರುವ ಸಂಪೂರ್ಣಪರಿಹಾರ ನೀಡಬೇಕು.
ಅಥವಾ ಎಕರೆಗೆ50 ಸಾವಿರ ರೂ.ಗಳನ್ನು ನೀಡಬೇಕುಎಂದು ಜಿಲ್ಲೆಯ ಜನಪ್ರತಿನಿಧಿಗಳುಸದ್ಯ ನಡೆಯುತ್ತಿರುವ ಬೆಳಗಾವಿಅಧಿವೇಶನದಲ್ಲಿ ಚರ್ಚಿಸಿ ನಿರ್ಣಯಕೈಗೊಳ್ಳಬೇಕು ಎಂದು ಸಂಘವು ತಿಳಿಸಿತು.ಬೆಳೆನಷ್ಟದಿಂದ ಬಳ್ಳಾರಿ ಜಿಲ್ಲೆಯಲ್ಲಿಬಾದನಹಟ್ಟಿ, ಮದಿರೆ, ಚಾನಾಳ್, ದರೂರುಗ್ರಾಮಗಳಲ್ಲಿ ನಾಲ್ವರು ರೈತರು ಈಗಾಗಲೇಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿಜಮೀನು ಇರುವ ಕೆಲವರಿಗೆ ಸರ್ಕಾರದಪರಿಹಾರ ಬರಲಿದೆ.
ಜಮೀನು ಇಲ್ಲದೆಗುತ್ತಿಗೆ ಮಾಡಿ ಆತ್ಮಹತ್ಯೆ ಮಾಡಿಕೊಂಡರೈತರ ಪರಿಸ್ಥಿತಿ ಹೇಗೆ? ಮುಖ್ಯಮಂತ್ರಿಗಳುಕೂಡಲೇ ಸಚಿವ ಸಂಪುಟ ಸಭೆ ಕರೆದುಚರ್ಚಿಸಿ ಆತ್ಮಹತ್ಯೆ ಮಾಡಿಕೊಂಡಿರುವಎಲ್ಲ ರೈತ ಕುಟುಂಬಗಳಿಗೆ ಪರಿಹಾರನೀಡಲು ನಿರ್ಣಯ ಕೈಗೊಳ್ಳಬೇಕುಎಂದು ಒತ್ತಾಯಿಸಿತು.ಜಿಲ್ಲೆಯಲ್ಲಿಮೆಣಸಿನಕಾಯಿ, ಭತ್ತ, ಹತ್ತಿ ಬೆಳೆನಾಶವಾಗಿರುವ ಪ್ರದೇಶದಲ್ಲಿಪರ್ಯಾಯ ಬೆಳೆ ಬೆಳೆಯಲು ಎಚ್‌ಎಲ್‌ಸಿ ಕಾಲುವೆಗೆ ಏ.10ರ ವರೆಗೆ ನೀರುಬಿಡಬೇಕು. ಈ ಕುರಿತು ಕೂಡಲೇ ಐಸಿಸಿಸಭೆ ಕರೆದು ನಿರ್ಣಯ ಕೈಗೊಳ್ಳಬೇಕುಎಂದು ಕೋರಿತು.