Advertisement

ಹಿಂದಿ ಹೇರಿಕೆಗೆ ಕರವೇ ವಿರೋಧ

02:24 PM Sep 15, 2021 | Team Udayavani |

ಬಳ್ಳಾರಿ: ಬ್ಯಾಂಕ್‌ಗಳಲ್ಲಿ ಗ್ರಾಹಕರ ಮೇಲೆ ಹಿಂದಿ ಭಾಷೆ ಹೇರಿಕೆ ದೌರ್ಜನ್ಯವನ್ನು ವಿರೋಧಿ ಸಿ ಎಲ್ಲ ರೀತಿಯ ಸೇವೆಗಳನ್ನು ಕನ್ನಡಭಾಷೆಯಲ್ಲೇ ನೀಡುವಂತೆ ಒತ್ತಾಯಿಸಿ ನಗರದ ಎಸ್‌ಬಿಐ ಬ್ಯಾಂಕ್‌ಎದುರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಭಾರತದ ಒಕ್ಕೂಟ ಸರ್ಕಾರವು ಪ್ರತಿವರ್ಷ ಸೆಪ್ಟೆಂಬರ್‌ 14ರಂದುನಮ್ಮ ತೆರಿಗೆ ಹಣದಲ್ಲಿ “ಹಿಂದಿ ದಿವಸ’ ಆಚರಣೆ ನಡೆಸುತ್ತ ಬಂದಿದೆ.ಈ ಮೂಲಕ ದೇಶದ ಇತರೆ ಭಾಷೆಗಳನ್ನು ಕಡೆಗಣಿಸಿ, ಹಿಂದಿಭಾಷೆಯೊಂದನ್ನೇ ಪ್ರತಿವರ್ಷ ಮೆರೆಸುತ್ತಿದೆ. ವೇದಿಕೆಯಿಂದ ಕಳೆದ 25ವರ್ಷಗಳಿಂದ ವಿರೋಧಿಸುತ್ತಲೇ ಬಂದಿದ್ದರೂ ಇದನ್ನು ರದ್ದುಗೊಳಿಸದಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುತ್ತಿದೆ ಎಂದುಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ನೀಡದಿರುವುದು, ಹಿಂದಿಭಾಷೆಯಲ್ಲಿ ಮಾತನಾಡುವಂತೆ ಗ್ರಾಹಕರನ್ನು ಒತ್ತಾಯಿಸುವ ಅನೇಕಪ್ರಕರಣಗಳು ಇತ್ತೀಚಿನ ದಿನದಲ್ಲಿ ಹಲವು ಕಡೆಗಳಲ್ಲಿ ಕೇಳಿಬರುತ್ತಿದೆ.ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹೆಚ್ಚಾಗುತ್ತಿದೆ.ಒತ್ತಾಯವಾಗಿ “ಹಿಂದಿ ಹೇರಿಕೆ’ಯನ್ನು ಹಾಗೂ ಅದರಿಂದ ಗ್ರಾಹಕರಮೇಲೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ವೇದಿಕೆಯಿಂದಬಳ್ಳಾರಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕರ್ನಾಟಕ ಗ್ರಾಮೀಣಬ್ಯಾಂಕ್‌ ಸೇರಿ ರಾಜ್ಯಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಕೂಡಲೇ ಹಿಂದಿ ಭಾಷೆ ಏರಿಕೆಯನ್ನು ರದ್ದುಗೊಳಿಸುವಂತೆ ಬ್ಯಾಂಕ್‌ಗಳವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವೇದಿಕೆಜಿಲ್ಲಾಧ್ಯಕ್ಷ ಚಾನಾಳ್‌ ಶೇಖರ್‌, ಡಿ.ಕಗ್ಗಲ್‌ ಶಂಕರ್‌, ಶಿವಕುಮಾರ್‌,ಕಿಶೋರ್‌ ಕುಮಾರ್‌, ತೋಟದ ವಿರೇಶ್‌, ಶಶಿಕುಮಾರ್‌, ಹುಬ್ಬಳ್ಳಿರಾಜ್‌, ಶಬರಿ ರವಿ, ರವೀಂದ್ರ ಪೂಜಾರಿ, ಗೆಣಿಕೆಹಾಳ್‌ ವಿರೇಶ್‌,ಸಿದ್ದಮ್ಮನಹಳ್ಳಿ ನಾಗರಾಜ, ಬಸವ, ವಿ.ಕುಮಾರ, ಮಲ್ಲಿಕಾರ್ಜುನಸ್ವಾಮಿ,ಯುವರಾಜ, ಕೋರಿ ನವೀನ್‌, ದತ್ತು, ಅಮ್ಮಸ್ವಾಮಿ, ಬಿ.ವಿರೇಶ್‌,ಮಲ್ಲಿಕಾರ್ಜುನ ಚಾನಾಳ್‌ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next