Advertisement
ರಾಜ್ಯ ಸರ್ಕಾರ ದೇವದಾಸಿಯರಿಗೆಮತ್ತಷ್ಟು ನೆರವನ್ನು ಕಲ್ಪಿಸಿ ಅನಿಷ್ಟ ದೇವದಾಸಿಪದ್ಧತಿಯಿಂದ ಬಿಡುಗಡೆ ಹೊಂದಲುನೆರವಾಗುವ ಬದಲು ಇರುವ ಸೌಲಭ್ಯಗಳನ್ನುಕಿತ್ತುಕೊಂಡು ಅವರನ್ನು ಇನ್ನಷ್ಟು ಸಂಕಷ್ಟಕ್ಕೆದೂಡುವ ನೀತಿ ಅನುಸರಿಸುತ್ತಿದೆ. ರಾಜ್ಯದ14 ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಅಧಿಕಸಂಖ್ಯೆಯಲ್ಲಿ ತೀವ್ರ ಸಂಕಷ್ಟದಲ್ಲಿರುವಇವರ ಕುರಿತು ಯಾವೊಬ್ಬ ಶಾಸಕರು ಸಹವಿಧಾನಸಭೆಯಲ್ಲಿ ಚರ್ಚಿಸುತ್ತಿಲ್ಲ. ಆದರೆಹೋರಾಟ ನಡೆಸಿ ಸಣ್ಣಪುಟ್ಟ ಸೌಲಭ್ಯಗಳನ್ನುಪಡೆಯುತ್ತಿರುವ ದೇವದಾಸಿಯರನ್ನುಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಉನ್ನತಾ ಧಿಕಾರಿಗಳುಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದುಪ್ರತಿಭಟನಾಕಾರರು ಆರೋಪಿಸಿದ್ದಾರೆ.
ದೇವದಾಸಿಯರ ಆರೇಳು ತಿಂಗಳಿಂದಬಾಕಿ ಇರುವ ಪಿಂಚಣಿ ಹಣವನ್ನುತಕ್ಷಣವೇ ಬಿಡುಗಡೆ ಮಾಡಬೇಕು.ಎಲ್ಲ ದೇವದಾಸಿಯರ ಮಾಸಿಕಸಹಾಯಧನವನ್ನು 3 ಸಾವಿರ ರೂಗಳಿಗೆಹೆಚ್ಚಿಸಬೇಕು. ಗಣತಿಯಲ್ಲಿ ಪರಿಗಣಿಸಲಾಗದಸಾವಿರಾರು ಮಹಿಳೆಯರನ್ನು ಗಣತಿ ಪಟ್ಟಿಗೆಸೇರ್ಪಡೆ ಮಾಡಿ ಸೌಲಭ್ಯ ಒದಗಿಸಬೇಕು.ದೇವದಾಸಿಯರ ಪರಿತ್ಯಕ್ತ ಮಕ್ಕಳ ಗಣತಿ ನಡೆಸಿಅವರಿಗೂ ದೇವದಾಸಿಯರ ರೀತಿಯಲ್ಲಿಪುನರ್ವಸತಿಗೆ ಕ್ರಮ ವಹಿಸಬೇಕು. ಶೇ.75ರಷ್ಟು ಸಹಾಯಧನದೊಂದಿಗೆ ಉಳಿದಶೇ. 25ರಷ್ಟು ಸಾಲಕ್ಕೆ ಐದು ವರ್ಷಗಳಕಾಲ ಬಡ್ಡಿರಹಿತವಾಗಿ ಕ್ರಮ ಕೈಗೊಳ್ಳಬೇಕು.ದೇವದಾಸಿಯರ ಕುಟುಂಬದ ಸದಸ್ಯರಿಗೆಕನಿಷ್ಠ 10 ಲಕ್ಷ ರೂಗಳ ಮೌಲ್ಯ 80/80ಅಳತೆಯ ಹಿತ್ತಲು ಸಹಿತ ಮನೆ ಒದಗಿಸಲುಯೋಜನೆ ರೂಪಿಸಬೇಕು ಸೇರಿದಂತೆ ಇನ್ನಿತರೆಬೇಡಿಕೆಗಳನ್ನು ಈಡೇರಿಸಬೇಕು ಎಂದುಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Related Articles
Advertisement