Advertisement
ನಗರದ ಪತ್ರಿಕಾ ಭವನದಲ್ಲಿ ಬುಧವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕನ್ನಡ ಸಾಹಿತ್ಯ ಪರಿಷತ್‌ಗೆ ಒಂದುಶತಮಾನದ ಇತಿಹಾಸವಿದೆ. ಕನ್ನಡಿಗರಪ್ರಾತಿನಿಧಿ ಕ ಹಾಗೂ ಮಾತೃಸಂಸ್ಥೆಯಾಗಿರುವಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ,ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ,ಉದ್ಯೋಗ, ಗಡಿ, ಜಲ ಸಮೆÂ ಬಗ್ಗೆನಿರಂತರವಾಗಿ ದನಿ ಎತ್ತುತ್ತಾ ಬಂದಿದೆ.ಕನ್ನಡದ ಹಿರಿಮೆ-ಗರಿಮೆಯ ಪ್ರತೀಕವಾದ ಕಸಾಪವನ್ನು ಮುನ್ನಡೆಸಲಲು ಸಮರ್ಥನಾಯಕತ್ವದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕಸಾಪಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿರಾಜ್ಯದ ಅನೇಕ ಹಿರಿಯ ಸಾಹಿತಿಗಳು,ಸಂಘಟಕರು, ಪರಿಷತ್ತಿನ ಜಿಲ್ಲಾ, ತಾಲೂಕುಘಟಕಗಳ ಪದಾಧಿಕಾರಿಗಳ ಒತ್ತಾಸೆ,ಬೆಂಬಲದಿಂದ ಇದೇ ನ. 21ರಂದುನಡೆಯಲಿರುವ ಚುನಾವಣೆಯಲ್ಲಿರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸಿದ್ದೇನೆ ಎಂದರು.
Related Articles
Advertisement
1958ರಬಳಿಕ ಈವರೆಗೂ ನಡೆಯದ ಬಳ್ಳಾರಿಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನುಆಯೋಜಿಸಲಾಗುವುದು. ರಾಜ್ಯದ ನಾಲ್ಕುಕಂದಾಯ ವಿಭಾಗಗಳಲ್ಲಿ ಪ್ರತಿವರ್ಷವಿವಿಧ ಸಾಹಿತ್ಯ ಸಾಂಸ್ಕೃತಿಕ ಸಮಾವೇಶಆಯೋಜನೆ, ರಾಜ್ಯದ ಉದಯೋನ್ಮುಖ,ಯುವ ಬರಹಗಾರರಿಗೆ ಕಮ್ಮಟ/ಶಿಬಿರಗಳ ಆಯೋಜನೆ, ಹೊರನಾಡುಕನ್ನಡಿಗರಿಗೆ ಉತ್ತಮ ಕೃತಿಗಳನ್ನು ಪ್ರಕಟಣೆ,ಕಸಾಪ ಪ್ರಕಟಿಸಿರುವ ಅಪರೂಪದಮೌಲಿಕ ಗ್ರಂಥಗಳ ಮರು ಮುದ್ರಣಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಾಹಿತಿ ಆರ್.ಜಿ.ನಾಗರಾಜ್, ಮೈಕೊ ಶಿವಕುಮಾರ್‌ಇದ್ದರು.