Advertisement

ಹೃದಯ ಶ್ರೀಮಂತಿಕೆಯ ಬಲ್ಲಾಳ್‌: ಮೊಯಿಲಿ

08:55 AM Oct 06, 2017 | Team Udayavani |

ಹೆಬ್ರಿ: ಸರಳತೆ, ಸೌಜನ್ಯದಿಂದ ಎಲ್ಲರ ಒಡನಾಡಿಯಾಗಿದ್ದ  ಎಚ್‌. ಪ್ರಸನ್ನ ಬಲ್ಲಾಳ್‌ ಹೃದಯ ಶ್ರೀಮಂತಿಕೆಯ ವ್ಯಕ್ತಿ. ನಾನು ಕಂಡ ಅತ್ಯಂತ ಸಜ್ಜನ, ಸುಸಂಸ್ಕೃತ, ಪ್ರಮಾಣಿಕ ವ್ಯಕ್ತಿ ಎಂದರೆ ಪ್ರಸನ್ನ ಬಲ್ಲಾಳ್‌. ಅಂತಹ ದಿವ್ಯ ಜ್ಯೋತಿ ಇಂದು ಮರೆಯಾಗಿದೆ ಎಂದು ಸಂಸದ ಡಾ| ಎಂ. ವೀರಪ್ಪ ಮೊಯಿಲಿ ಹೇಳಿದರು.

Advertisement

ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷ, ಹೆಬ್ರಿ ಎ.ಪಿ.ಎಂ. ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಎಚ್‌. ಪ್ರಸನ್ನ ಬಲ್ಲಾಳ್‌ ಅವರ ನಿಧನದ ಹಿನ್ನೆಲೆಯಲ್ಲಿ ಹೆಬ್ರಿ ಬಂಟರ ಭವನದಲ್ಲಿ ಗುರುವಾರ ನಡೆದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.

ಹೆಬ್ರಿಯ ಪ್ರತಿಯೊಂದು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಹೆಬ್ರಿ ಪರಿಸರದ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಲ್ಲದೆ ಹೆಬ್ರಿ ತಾಲೂಕು ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಪ್ರಸನ್ನ ಬಲ್ಲಾಳ್‌ ಅವರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್‌. ಗೋಪಾಲ ಭಂಡಾರಿ ಹೇಳಿದರು.

ರಾಜ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಹರಿದಾಸ ಬಿ.ಸಿ. ರಾವ್‌ ಶಿವಪುರ ಅವರು ಜೇಸಿಐ ಪರವಾಗಿ ಕವನ ವಾಚನ ಮೂಲಕ ಬಲ್ಲಾಳ್‌ ಅವರಿಗೆ ನುಡಿನಮನ ಸಲ್ಲಿಸಿದರು. ಬಾಲಕೃಷ್ಣ ನಾಯಕ್‌, ಟಿ.ಜಿ. ಆಚಾರ್ಯ, ಟಿ. ಬೋಜ ಶೆಟ್ಟಿ, ಜನಾರ್ದನ ಮೊದ ಲಾದವರು ನುಡಿನಮನ ಸಲ್ಲಿಸಿದರು.

ಎಚ್‌. ಪ್ರಸನ್ನ ಬಲ್ಲಾಳ್‌ ಅವರ ಕುಟುಂಬ ಹಾಗೂ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಾರ್ವಜನಿಕರು ಬಲ್ಲಾಳ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಪ್ರಾರ್ಥನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಸಚಿವ ರಮನಾಥ ರೈ, ಜಯಪ್ರಕಾಶ್‌ ಹೆಗ್ಡೆ, ಪ್ರತಾಪ್‌ಚಂದ್ರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಭಯಚಂದ್ರ ಜೈನ್‌, ಪ್ರಸನ್ನ ಬಲ್ಲಾಳ್‌ ಅವರ ತಾಯಿ ಶೀಲಾ ಸುಬೋಧ ಬಲ್ಲಾಳ್‌, ಪತ್ನಿ ಬಾನು ಪಿ. ಬಲ್ಲಾಳ್‌, ಪುತ್ರ ಅಮೋಘ… ಬಲ್ಲಾಳ್‌, ಪ್ರಸಾದ್‌ ಬಲ್ಲಾಳ್‌, ಪ್ರವೀಣ್‌ ಬಲ್ಲಾಳ್‌, ಮಲ್ಲಿಕಾ ಬಲ್ಲಾಳ್‌, ಡಾ| ಸುಮಂತ್‌ ಶೆಟ್ಟಿ ಮೊದಲಾದವರಿದ್ದರು.

ಸೀತಾನದಿ ವಿಠಲ ಶೆಟ್ಟಿ  ಅವರು ಕಾರ್ಯಕ್ರಮ ನಿರೂಪಿಸಿದರು.

ಮರೆಯಲಾಗದ ಕೊಡುಗೆ
ಬಂಟ ಸಮಾಜಕ್ಕೆ ಬಲ್ಲಾಳ್‌ ಅವರ ಕೊಡುಗೆ ಮರೆಯಲಾಗದ್ದು. ಹೆಬ್ರಿಯಲ್ಲಿ ಬೃಹತ್‌ ಬಂಟರ ಭವನ ನಿರ್ಮಾಣವಾಗಬೇಕಾದರೆ ಬಲ್ಲಾಳ್‌ ಕುಟುಂಬ ಪ್ರಮುಖ ಕಾರಣ ಎಂದು ಹೆಬ್ರಿ-ಅಜೆಕಾರು ವಲಯ ಬಂಟರ ಸಂಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next