Advertisement

ಧ್ಯಾನ್‌ ಚಂದ್‌ ಭಾರತೀಯ ಹಾಕಿಯ ಪಿತಾಮಹ ; ಬಲ್ಬೀರ್ ಸಿಂಗ್‌ ಭಾರತೀಯ ಹಾಕಿಯ ಅಂಕಲ್‌

02:50 AM May 29, 2020 | Hari Prasad |

ಹೊಸದಿಲ್ಲಿ: ಬಲ್ಬೀರ್‌ ಸಿಂಗ್‌ ಭಾರತ ಕಂಡ ಅಸಾಮಾನ್ಯ ಹಾಕಿ ಆಟಗಾರ, ಆದರೆ ಅವರ ಯೋಗ್ಯತೆಯನ್ನು ಸರಿಯಾಗಿ ಗುರುತಿಸಿಲ್ಲ ಎಂಬುದಾಗಿ 1975ರ ವಿಶ್ವಕಪ್‌ ವಿಜೇತ ಭಾರತದ ಹಾಕಿ ತಂಡದ ನಾಯಕ ಅಜಿತ್‌ ಪಾಲ್‌ ಸಿಂಗ್‌ ಹೇಳಿದ್ದಾರೆ.

Advertisement

‘ಧ್ಯಾನ್‌ಚಂದ್‌, ಬಲ್ಬೀರ್‌ ಇಬ್ಬರೂ ಭಾರತೀಯ ಕ್ರೀಡೆಯ ಧ್ರುವತಾರೆಗಳು. ಧ್ಯಾನ್‌ಚಂದ್‌ ಭಾರತೀಯ ಹಾಕಿಯ ಪಿತಾಮಹರಾದರೆ, ಬಲ್ಬೀರ್ ಸಿಂಗ್‌ ಭಾರತೀಯ ಹಾಕಿಯ ಅಂಕಲ್‌ ಎನಿಸಿಕೊಳ್ಳುತ್ತಾರೆ.

ಆದರೆ ಧ್ಯಾನ್‌ಚಂದ್‌ಗೆ ಸಿಕ್ಕಷ್ಟು ಗೌರವ ಬಲ್ಬೀರ್ ಅವರಿಗೆ ಸಿಗಲಿಲ್ಲ. ಇನ್ನಾದರೂ ಅವರ ಸಾಧನೆಗೆ ಬೆಲೆ ಸಿಗಬೇಕಿದೆ’ ಎಂದು ಅಜಿತ್‌ಪಾಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next