Advertisement
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ್ದ ವೇಳೆ, ಭಾರತ ಹಾಲಿ ಸಮಸ್ಯೆ ಪರಿಹರಿಸಲು “ಸಕಾರಾತ್ಮಕ ಮತ್ತು ತಣ್ಣನೆಯ ರಾಜತಾಂತ್ರಿಕ ನಡೆ’ಯ ಅಗತ್ಯ ಇದೆ ಎಂದು ಹೇಳಿತ್ತು. ತ್ವೇಷಮಯ ವಾತಾವರಣಕ್ಕೆ ಪ್ರೋತ್ಸಾಹ ನೀಡುವುದನ್ನು ತಡೆಯಬೇಕು ಎಂದು ಅಭಿಪ್ರಾಯಪಟ್ಟಿತ್ತು. ಅದಕ್ಕೆ ಮಾಸ್ಕೋದಲ್ಲಿ ಪ್ರತಿಕ್ರಿಯೆ ನೀಡಿದ ರಷ್ಯಾ ವಿದೇಶಾಂಗ ಸಚಿವಾಲಯ, ಭಾರತ ಹೊಂದಿರುವ ನಿಲುವು ಪ್ರಶಂಸನೀಯ ಎಂದಿದೆ.
ಶನಿವಾರ ಉಕ್ರೇನ್ ಗಡಿ ಭಾಗದ ಸಮೀಪದಲ್ಲಿ ಬೃಹತ್ ಪ್ರಮಾಣದಲ್ಲಿ ಪರಮಾಣು ಶಸ್ತ್ರಾಸ್ತ್ರ ಸಹಿತವಾಗಿರುವ ಕ್ಷಿಪಣಿಗಳ ಪರೀಕ್ಷೆಗಳನ್ನು ರಷ್ಯಾ ನಡೆಸಲಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಖುದ್ದಾಗಿ ಅದನ್ನು ವೀಕ್ಷಿಸಲಿದ್ದಾರೆ. ಅದರಲ್ಲಿ ಉತ್ತರ ಮತ್ತು ಕಪ್ಪು ಸಮುದ್ರ ವ್ಯಾಪ್ತಿಯಲ್ಲಿರುವ ಯುದ್ಧ ನೌಕೆಗಳೂ ಪಾಲ್ಗೊಳ್ಳಲಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಉಕ್ರೇನ್‌ನಲ್ಲಿ ಸೇನಾ ಪಡೆಗಳು ನಡೆದ ದೌರ್ಜನ್ಯದಿಂದಾಗಿ 126 ಮಕ್ಕಳೂ ಸೇರಿದಂತೆ, 9 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ರಷ್ಯಾ ಆರೋಪಿಸಿದೆ. ಅದಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿರುವ ದಾಖಲೆಗಳನ್ನೂ ಅದು ನೀಡಿದೆ.
Related Articles
Advertisement