ಮಲ್ಪೆ: ಶ್ರೀರಾಮನ ಹೆಸರಿ ನಲ್ಲಿ ಭಕ್ತಿ ಶಕ್ತಿ, ನೀತಿ, ಸುಖ, ಶಾಂತಿ, ನೆಮ್ಮದಿ ಎಲ್ಲವೂ ಇವೆ. ಆತ ಲೋಕಕಲ್ಯಾಣಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾಪುರುಷ. ರಾಮ ಚಂದ್ರನ ಆದರ್ಶಗಳು ಸಾರ್ವಕಾಲಿಕ. 50 ವರ್ಷಗಳಿಂದ ಇಲ್ಲಿನ ಶ್ರೀರಾಮ ಭಜನ ಮಂದಿರದ ಸದಸ್ಯರು ರಾಮನ ಸೇವೆ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ಮಲ್ಪೆ ಕೊಳ ಬಾಲಕರ ಶ್ರೀರಾಮ ಭಜನ ಮಂದಿರದ ಸುವರ್ಣ ಮಹೋತ್ಸವ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ರಾಮ ಮತ್ತು ವಾನರ ಸೇನೆಯ ಸಂಬಂಧಗಳು ಸ್ವಾಮಿ ಭಕ್ತಿ, ದೇಶ ಪ್ರೇಮಜನರಲ್ಲಿ ಹೇಗಿರಬೇಕು ಎನ್ನು ವು ದನ್ನು ತೋರಿಸಿಕೊಡುತ್ತವೆ ಎಂದರು.
ಸಚಿವರಾದ ಎಸ್. ಅಂಗಾರ, ವಿ. ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಭಜನ ಮಂದಿರದ ಅಧ್ಯಕ್ಷ ಕರುಣಾಕರ್ ಎಸ್. ಸಾಲ್ಯಾನ್, ಗೌರವಾಧ್ಯಕ್ಷ ಕೃಷ್ಣಪ್ಪ ಶ್ರೀಯಾನ್, ಉಪಾಧ್ಯಕ್ಷ ಸತೀಶ್ ಅಮೀನ್, ಸುವರ್ಣ ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮೆಂಡನ್, ಕೋಶಾಧಿಕಾರಿ ಸದಾನಂದ ಸಾಲ್ಯಾನ್, ಸಮಿತಿಯ ಪ್ರಮುಖರಾದ ಮಹಾಬಲ ಸಾಲ್ಯಾನ್, ನಾಗೇಶ್ ಸಾಲ್ಯಾನ್, ಸಂತೋಷ್, ಉದಯ ಕುಂದರ್, ನವೀನ್‌ಸಾಲ್ಯಾನ್, ಲಕ್ಷ್ಮಣ ಕರ್ಕೇರ, ಲಕ್ಷ್ಮೀಶ ಕರ್ಕೇರ, ಸೀತಾರಾಮ ಮಹಿಳಾ ಮಂಡಲದ ಅಧ್ಯಕ್ಷೆ ವಿದ್ಯಾ ವಿಷ್ಣು ಕರ್ಕೇರ, ಉಪಾಧ್ಯಕ್ಷೆ ವೇದಾವತಿ ಕೃಷ್ಣಪ್ಪ ಶ್ರೀಯಾನ್, ಗೌರವ ಸಲಹೆಗಾರ್ತಿ ಜಯಂತಿ ಸುವರ್ಣ, ಪ್ರಧಾನ ಕಾರ್ಯದರ್ಶಿ ರೋಹಿಣಿ ಕಮಲಾಕ್ಷ ಮೈಂದನ್ ಹಾಗೂ ಸುವರ್ಣ ಮಹೋತ್ಸವ ಸಮಿತಿ, ಮಂದಿರದ ಆಡಳಿತ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಬ್ಸಿಡಿ ಡೀಸೆಲ್ ನಿರಂತರ
ವರ್ಷದ 10 ತಿಂಗಳು ನಿರಂತರವಾಗಿ ರಾಜ್ಯದ ಮೀನುಗಾರರಿಗೆ ಸಬ್ಸಿಡಿ ಡೀಸೆಲ್‌ಗೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಲ್ಪೆ ಮೀನುಗಾರರ ಸಂಘಕ್ಕೆ ಭರವಸೆ ನೀಡಿದರು.