Advertisement

ಮೀರಾರೋಡ್‌:ಬಾಲಾಜಿ ಸನ್ನಿಧಿಯಲ್ಲಿ  ಶನೀಶ್ವರ ಜಯಂತಿ ಆಚರಣೆ

05:06 PM May 27, 2017 | Team Udayavani |

ಮುಂಬಯಿ: ಮೀರಾರೋಡ್‌ ಪೂರ್ವದ ಬಾಲಾಜಿ ಸನ್ನಿಧಿಯಲ್ಲಿ ಶ್ರೀ ಶನೀಶ್ವರ ಜಯಂತಿಯು ಮೇ 25ರಂದು ವಿವಿಧ ಧಾರ್ಮಿಕ, ಆಧ್ಯಾತ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

Advertisement

ವಿದ್ವಾನ್‌ ಗೋಪಾಲ್‌ ಭಟ್‌ ಅವರು ಶ್ರೀ ದೇವರ ಗ್ರಂಥ ಪಾರಾಯಣಗೈದು ಶ್ರೀ ಶನಿದೇವರ ಮಹಾತೆ¾ಯನ್ನು ತಿಳಿಸಿ, ನಾನು- ನನ್ನದು, ಎಲ್ಲವೂ ನನ್ನಿಂದಲೇ ಎಂಬ ಅಹಂನ್ನು ತೊರೆದಾಗ ಮಾತ್ರ ಮನುಷ್ಯ ಶ್ರೀ ಶನಿದೇವರ ಕೃಪಾಕಟಾಕ್ಷಕ್ಕೆ ಪಾತ್ರನಾಗುತ್ತಾನೆ. ಲೌಖೀಕ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಪರೋಪಕಾರ ಜೀವನ, ಸತ್ಯತೆ, ಪ್ರಾಮಾಣಿಕ ದುಡಿಮೆಯಿಂದ ಜೀವನ ಸವೆಸುಸುವುದೇ ಶನಿಗ್ರಂಥದ ತಾತ್ಪರ್ಯವಾಗಿದೆ ಎಂದರು.

ಟ್ರಸ್ಟಿ ಸಚ್ಚಿದಾನಂದ ರಾವ್‌ ಅವರು ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿ, ಜೂನ್‌ 1ರಿಂದ ಜೂ. 10ರವರೆಗೆ ಉಚಿತ ವಸಂತ ಶಿಬಿರವನ್ನು ಬಾಲಾಜಿ ಸನ್ನಿಧಿಯಲ್ಲಿ ಆಯೋಜಿಸಲಾಗಿದೆ. ಈಗಾಗಲೇ ನಮ್ಮ ನಿರೀಕ್ಷೆಗೂ ಮೀರಿ ಅನೇಕ ಮಂದಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಜಾತಿ, ಮತ, ಧರ್ಮ ಬೇಧವಿಲ್ಲದೆ ಎಲ್ಲರೂ ಮುಕ್ತವಾಗಿ ಶಿಬಿರದಲ್ಲಿ ಭಾಗವಹಿಸಬಹುದು. ಸಂಪನ್ಮೂಲ ವ್ಯಕ್ತಿಯಾಗಿ ವಿದ್ವಾನ್‌ ರಮಣ ಆಚಾರ್ಯ ಅವರು ವೇದ, ಉಪನಿಷತ್ತು, ಸಂಸ್ಕೃತದ ಬಗ್ಗೆ ಪ್ರವಚನ ನೀಡಲಿದ್ದಾರೆ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬಾಲಾಜಿ  ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಮಠದ ಪ್ರಬಂಧಕ ಹಾಗೂ ಟ್ರಸ್ಟಿ ರಾಧಾಕೃಷ್ಣ ಭಟ್‌, ಅರ್ಚಕ ವಿಷ್ಣು ಭಟ್‌, ಜಯರಾಮ ಭಟ್‌, ಪರಿವಾರದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೊನೆಯಲ್ಲಿ ಮಹಾಮಂಗಳಾರತಿಯ ಬಳಿಕ ಪ್ರಸಾದ ರೂಪದಲ್ಲಿ   ಅನ್ನಸಂತರ್ಪಣೆ   ಜರಗಿತು. ನೂರಾರು ಮಂದಿ ಭಕ್ತಾದಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ತುಳು-ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next