Advertisement

ಕುಟುಂಬ ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಸಹಕರಿಸಲು ಮನವಿ

04:30 PM Apr 30, 2020 | Naveen |

ಬಳಗಾನೂರು: ಕೋವಿಡ್‌ 19 ನಿಯಂತ್ರಿಸಲು ಪರಿಣಾಮಕಾರಿ ಮಾರ್ಗವಾಗಿರುವ ಕುಟುಂಬ ಆರೋಗ್ಯ ಸಮೀಕ್ಷೆಗಾಗಿ ಮತಗಟ್ಟೆ ಅಧಿಕಾರಿಗಳಾದ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಮನೆಗೆ ಭೇಟಿ ನೀಡಿದಾಗ ಕುಟುಂಬದ ಸದಸ್ಯರ ಸಂಪೂರ್ಣ ವಿವರ ಮತ್ತು ಆರೋಗ್ಯ ಸ್ಥಿತಿಗಳಿಗಳ ಬಗ್ಗೆ ಮಾಹಿತಿ ನೀಡಿ ಸಹಕರಿಸಿ ಎಂದು ಪಪಂ ಪ್ರಭಾರಿ ಮುಖ್ಯಾಧಿಕಾರಿ, ನೋಡಲ್‌ ಅಧಿಕಾರಿ ರಡ್ಡಿ ರಾಯನಗೌಡ ಹೇಳಿದರು.

Advertisement

ಪಟ್ಟಣದ 4ನೇ ವಾರ್ಡ್‌ಗೆ ಬುಧವಾರ ಭೇಟಿ ನೀಡಿದ ಅವರು ಮತಗಟ್ಟೆ ಅಧಿಕಾರಿಗಳು ನಡೆಸುವ ಕುಟುಂಬ ಆರೋಗ್ಯ ಸಮೀಕ್ಷಾ ವರದಿ ಮಾಡುವುದರ ಕುರಿತು ಮಾಹಿತಿ ಪಡೆದುಕೊಂಡು ಮಾತನಾಡಿದ ಅವರು, ಮತದಾರ ಪಟ್ಟಿಯಂತೆ ಮನೆ ಯಜಮಾನನ ಹೆಸರು, ವಯಸ್ಸು, ಮನೆ ಸಂಖ್ಯೆ, ವಿಳಾಸ, 60 ವರ್ಷ ಮೇಲ್ಪಟ್ಟವರ ಸಂಖ್ಯೆ, ಅವರಿಗಿರುಬಹುದಾದ ಖಾಯಿಲೆಗಳ ಮಾಹಿತಿ, ಗರ್ಭಿಣಿಯರ ಮಾಹಿತಿ ಮತ್ತು ಇತರರಿಗೆ ನೆಗಡಿ, ಕೆಮ್ಮು, ಉಸಿರಾಟದ ರೋಗ ಲಕ್ಷಣಗಳಿರು ಕುರಿತು ಸರಿಯಾಗಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಮತಗಟ್ಟೆ ಅಧಿಕಾರಿ ಸಿದರಾಯ, ಬಿರಾದಾರ, ಪಪಂ ಸದಸ್ಯರಾದ ಮುದುಕಪ್ಪ ಮುಖಂಡ ಅಮರೇಶ ಲಡ್ಡಿನ, ಎಸ್‌ಡಿಎ ತಿರುಪತಿ, ಪಂಪಾಪತಿ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next