ಕುಕನೂರಿನಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾ ಡಿದ ಅವರು, ಕಾಂಗ್ರೆಸ್‌ನವರು ಈ ಹಿಂದೆ ಶ್ರೀರಾಮ ಚಂದ್ರನಿಗೆ ಬೀಗ ಹಾಕಿದ್ದರು. ಈಗ ಬಜರಂಗ ದಳಕ್ಕೆ ಬೀಗ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಬಜರಂಗ ದಳವನ್ನು ಪಿಎಫ್‌ಐ ಜತೆ ಹೋಲಿಸುತ್ತಿದ್ದಾರೆ. ಪಿಎಫ್‌ಐ ರಾಷ್ಟ್ರದ್ರೋಹಿ ಸಂಘಟನೆ. ಅದನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ನಿಷೇಧಿ ಸಿದೆ. ಆದರೆ ಕಾಂಗ್ರೆಸ್ ಆಡ ಳಿತದಲ್ಲಿ ದೇಶದ್ರೋಹಿ ಪಿಎಫ್‌ಐ ಮೇಲಿನ 175 ಕೇಸ್‌ಗಳನ್ನು ಖುಲಾಸೆ ಮಾಡಿದ್ದರು. ಈಗ ಕಾಂಗ್ರೆಸ್‌ನವರು ಪಿಎಫ್‌ಐ ನಿಷೇಧ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
Advertisement
ದೇವರ ಹೆಸರಿನಲ್ಲಿರುವ ಸಂಘಟನೆಗಳು ಮಾಡುವ ಕುಕೃತ್ಯಗಳು ಹಾಗೂ ಅದರಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಅಂತಹ ಸಂಘಟನೆಗಳನ್ನು ನಿಷೇಧಿಸುವುದರಲ್ಲಿ ತಪ್ಪೇನಿದೆ? ದೇವರ ಹೆಸರಿಟ್ಟುಕೊಳ್ಳುವ ಸಂಘಟನೆಗಳು ಮಾಡಿದ್ದೆಲ್ಲವನ್ನು ನೋಡಿಕೊಂಡು, ಸಹಿಸಿಕೊಂಡು ಇರಬೇಕೇ ?-ಕನ್ಹಯ್ಯಕುಮಾರ್ , ಕಾಂಗ್ರೆಸ್ ಮುಖಂಡ
ಕಲಘಟಗಿ: ಕಾಂಗ್ರೆಸ್‌ನವರು ಎಸ್‌ಡಿಪಿಐ-ಪಿಎಫ್‌ಐ ಜತೆ ಬಜರಂಗದಳವನ್ನೂ ನಿಷೇಧಿಸುವುದಾಗಿ ಹೇಳಿದ್ದಾರೆ. ಬಜರಂಗದಳ ನಿಷೇಧ ಮಾಡುವ ಅ ಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಬಜರಂಗದಳ ದೇಶಾದ್ಯಂತ ಇರುವ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರಕಾರದ ಅವ ಧಿಯಲ್ಲಿ ತುಷ್ಟೀಕರಣ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ರೈತನ ದುಃಸ್ಥಿತಿಯನ್ನು ಕೇಳುವವರಿರಲಿಲ್ಲ. ದುಡಿಯುವ ವರ್ಗ ನಿರಾಶರಾಗಿದ್ದರು. ವಿದ್ಯಾರ್ಥಿಗಳಿಗೆ ಕೆಲಸ ಸಿಗುವ ಭರವಸೆ ಇರಲಿಲ್ಲ. ಇವರು ಮಾತ್ರ ಭಾಗ್ಯದ ಮೇಲೆ ಭಾಗ್ಯ ಕೊಡುತ್ತ ಬಂದಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಬಿಜೆಪಿಗೆ ಬೆಂಬಲ ದೊರೆಯುತ್ತಿದೆ. ಸ್ವಾತಂತ್ರÂ ಬಂದಾಗಿನಿಂದಲೂ ರೇಷನ್ ಕೊಡಲಾಗುತ್ತಿದೆ. ಈಗ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಅಂತ ಹೇಳುತ್ತಿದ್ದಾರೆ. ಮೋದಿ ಅಕ್ಕಿಗೆ ಸಿದ್ದರಾಮಯ್ಯ ನೀಡಿದ್ದು ಖಾಲಿ ಚೀಲ ಮಾತ್ರ ಎಂದರು.