Advertisement

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

02:17 PM Nov 26, 2024 | Team Udayavani |

ಬಜಪೆ: ಬಜಪೆ ಪೇಟೆಯಲ್ಲಿ ಏಳುವರ್ಷಗಳ ಹಿಂದೆ ಲೋಕೋ ಪಯೋಗಿ ಇಲಾಖೆಯಿಂದ ನಡೆದ ಚರಂಡಿಯ ಕಾಮಗಾರಿಯು ಪೂರ್ತಿ ಯಾಗದೇ ಪಾರ್ಕಿಂಗ್‌ ಹಾಗೂ ಪಾದಚಾರಿಗಳಿಗೆ ಸಮಸ್ಯೆಯಾಗಿ ಅಪಾಯಕ್ಕೆ ಕಾರಣವಾಗಿತ್ತು. ಈ ಬಗ್ಗೆ ಉದಯವಾಣಿ ಸುದಿನ ನ. 7ರಂದು ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿಗೆ ಸ್ವಂದಿಸಿದ ಬಜಪೆ ಪ.ಪಂ. ಚರಂಡಿಯನ್ನು ಸ್ವತ್ಛಗೊಳಿಸಿದೆ.

Advertisement

ಚರಂಡಿಗೆ ಕೆಲವೆಡೆ ಸ್ಲ್ಯಾಬ್‌ ಹಾಕದೇ ತೆರೆದೇ ಇದ್ದ ಕಾರಣ, ಇದು ಸಮಸ್ಯೆಗೆ ಕಾರಣವಾಗಿತ್ತು. ಇದರಲ್ಲಿ ಹೂಳು ಜತೆಗೆ ಪ್ಲಾಸ್ಟಿಕ್‌ ತ್ಯಾಜ್ಯಗಳು ತುಂಬಲು ಕಾರಣವಾಗಿತ್ತು. ರಸ್ತೆ ವಿಸ್ತರಣೆ, ಕಾಂಕ್ರೀಟ್‌ ಕಾಮಗಾರಿ ಸಮಯದಲ್ಲಿ ತೆರೆದಿದ್ದ ಚರಂಡಿಯ ಹೂಳನ್ನು ಕೆಲವೆಡೆ ಅರ್ಧದಷ್ಟು ಲೋಕೋಪಯೋಗಿ ಇಲಾಖೆಯಿಂದ ತೆಗೆಯಲಾಗಿತ್ತು.

ಪ್ರಯೋಜನಕ್ಕೆ ಬಾರದ ಚರಂಡಿ
ಮಳೆಯ ನೀರು ಹರಿದು ಹೋಗದೇ, ಅದರಲ್ಲಿ ನಿಂತು ಹೋಗಿ. ಚರಂಡಿ ಪ್ರಯೋಜನಕ್ಕೆ ಬಾರದೇ ಕಸ, ತ್ಯಾಜ್ಯ ತುಂಬಿ ಕಸದ ತೊಟ್ಟಿಯಂತೆ ಕಾಣುತ್ತಿತ್ತು. ಮಳೆ ನೀರು ಕೊಳೆತು ನಿಂತು ದುರ್ವಾಸನೆ ಬರುತ್ತಿತ್ತು. ಸೊಳ್ಳೆಗಳು ಉತ್ಪತ್ತಿಗೆ ಕಾರಣವಾಗಿತ್ತು.

ಲೋಕೋಪಯೋಗಿಯ ಇಲಾಖೆಯ ಬದಲಿಗೆ ಬಜಪೆ ಪ.ಪಂ.ನಿಂದ ಕಾರ್ಯ
ಲೋಕೋಪಯೋಗಿ ಇಲಾಖೆಯು ಚರಂಡಿ ಹೂಳು ಜತೆಗೆ ಕೊಳಚೆ ನೀರನ್ನು ಚರಂಡಿಯಿಂದ ತೆಗೆಯ ಬೇಕಿತ್ತು. ಆದರೆ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ನೀಡದೇ ಇರುವುದರಿಂದ ಬಜಪೆ ಪಟ್ಟಣ ಪಂಚಾಯತ್‌ ಜನರ ಆರೋಗ್ಯ ಸ್ವತ್ಛತೆಯ ಬಗ್ಗೆ ಜಾಗೃತಿ ವಹಿಸಿ, ಕೊಳಚೆ ನೀರನ್ನು ಟ್ಯಾಂಕರ್‌ ಮೂಲಕ ತೆಗೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next