Advertisement

ಬೆಂಕಿಯ ಉಂಡೆಯಾಯಿತು ವಿಮಾನ

12:24 PM May 22, 2019 | keerthan |

ಮಂಗಳೂರು: ದೇಶದ ಈ ಪ್ರದೇಶದಲ್ಲೇ ಬಜಪೆಯಲ್ಲಿ ಸಂಭವಿಸಿದ ಭೀಕರ ವಿಮಾನಾಪಘಾತಕ್ಕೆ ಈಗ 9 ವರ್ಷ. ದುಬಾೖನಿಂದ ಅಂದು ಮುಂಜಾನೆ ಮಂಗಳೂರಿನ ಬಜಪೆ ವಿಮಾನ ನಿಲ್ದಾಣಕ್ಕೆ ಬಂದ ಏರಿಂಡಿಯಾ ಎಕ್ಸ್‌ ಪ್ರಸ್‌ ವಿಮಾನ ನಿಯಂತ್ರಣ ಕಳೆದುಕೊಂಡು ಸಮೀಪದ ಕೆಂಜಾರು ಎಂಬಲ್ಲಿ ಬೆಂಕಿನ ಉಂಡೆಯಾಗಿ ಮುಂಜಾನೆ 6.20ರ ವೇಳೆ ಪತನಗೊಂಡಾಗ ವಿಮಾನದಲ್ಲಿದ್ದ 158 ಮಂದಿ ಪ್ರಯಾಣಿಕರು ಮೃತರಾದರು. 8 ಮಂದಿ ಪವಾಡಸದೃಶರಾಗಿ ಪಾರಾದರು. ಪೈಲಟ್‌, ಸಹಪೈಲಟ್‌ ಸಿಬಂದಿಯೂ ಮೃತಪಟ್ಟರು.

Advertisement

ಬಹುತೇಕ ಕಳೇಬರಗಳು ಸುಟ್ಟು ಕರಕ ಲಾಗಿದ್ದು ಗುರುತು ಹಿಡಿಯಲು ಸಾಧ್ಯವಿರಲಿಲ್ಲ. ಮುಂಜಾನೆ ಈ ನತದೃಷ್ಟ ವಿಮಾನ ಎಲ್ಲಾ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ವಿಮಾನ ನಿಲ್ದಾಣದಲ್ಲಿ ವಸ್ತುಶಃ ಇಳಿದಿತ್ತು. ಆದರೆ ರನ್‌ವೇಯಲ್ಲಿ ನಿಲ್ಲದೆ ಮುಂದಕ್ಕೆ ಚಲಿಸುತ್ತಲೇ ಅಲ್ಲಿನ ಸೂಚನಾ ಗೋಪುರದ ಎರಡು ಕಂಬಗಳಿಗೆ ಢಿಕ್ಕಿಯಾಗಿ, ಕಂಬ ಮುರಿದು ಅಲ್ಲಿಂದ ಸುಮಾರು 150 ಮೀ. ಅಂತರಕ್ಕೆ ವಿದ್ಯುತ್‌ ಸಂಪರ್ಕದ ತಂತಿಗಳನ್ನು ತುಂಡರಿಸುತ್ತಾ ಪತನವಾಯಿತು. ಬೆಂಕಿಗೆ ಆಹುತಿಯಾಯಿತು.

ಮುಖ್ಯ ಪೈಲಟ್‌ನ ನಿರ್ಲಕ್ಷ್ಯ, ಸಹ ಪೈಲಟ್‌ನ ಸಲಹೆ ಪಾಲಿಸದೆ ಇದ್ದುದು ಈ ದುರ್ಘ‌ಟನೆಗೆ ಕಾರಣ ಎಂದು ಬಳಿಕ ತಿಳಿದು ಬಂತು. ಮೃತ ಪಟ್ಟವರಲ್ಲಿ ದ.ಕನ್ನಡ, ಉಡುಪಿ, ಉ. ಕನ್ನಡ, ಕೇರಳ ದವರಿದ್ದರು. ರಜಾದಿನಗಳನ್ನು ದುಬಾೖನಲ್ಲಿ ಕಳೆದು ಹುಟ್ಟೂರಿಗೆ ಹಿಂದಿರುಗುತ್ತಿದ್ದ ತಾಯಿ ಮಕ್ಕಳು ಹೆಚ್ಚಾಗಿದ್ದರು. ಶುಭ ಕಾರ್ಯ ಮತ್ತು ರಜೆಗೆ ಊರಿಗೆ ಹೊರಟ ಅನೇಕರಿದ್ದರು.
ಬಜಪೆಯಲ್ಲಿ ನೂತನ ರನ್‌ವೇ ನಿರ್ಮಾಣ 2006ರಲ್ಲಿ ಪೂರ್ಣವಾಗಿ, ಅಲ್ಲಿಂದ ವಿಮಾನಗಳ ಹಾರಾಟ ನಡೆಯುತ್ತಿತ್ತು. ಹೊಸ ಟರ್ಮಿನಲ್‌ ಕಟ್ಟಡದ ಉದ್ಘಾಟನೆ ಅದರ ಹಿಂದಿನ ವಾರ ನಡೆದಿತ್ತು.

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next