ವೇಣೂರು: ಯುವ ಸಮುದಾಯ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದನ್ನು ಮರೆಯಬಾರದು. ರಕ್ತದಾನದಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್ ಅಂಶ ನಿಯಂತ್ರಣ ಸಾಧ್ಯ. ಗ್ರಾಮೀಣ ಭಾಗದ ಜನತೆ ಇಂತಹ ಆರೋಗ್ಯ ಶಿಬಿರಗಳ ಉಪಯೋಗ ಪಡೆದುಕೊಳ್ಳಬೇಕು. ಆರೋಗ್ಯದ ಕಾಳಜಿಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚೈತ್ರಾ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ, ದ.ಕ. ರೆಡ್‌ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆ ಮಂಗಳೂರು, ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯ, ಆಸ್ಪತ್ರೆಯ ಸಹಯೋಗದಲ್ಲಿ ರವಿವಾರ ಬಜಿರೆ ಸ.ಉ.ಪ್ರಾ. ಶಾಲಾ ಆವರಣದಲ್ಲಿ ಜರಗಿದ ಆರೋಗ್ಯದ ಮೇಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕನ್ಯಾಡಿ ಸೇವಾಭಾರತಿ ಆರೋಗ್ಯ ಭಾರತಿಯ ಪ್ರಮುಖ ಶ್ರೀಧರ್ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಆ್ಯನ್ಸ್ ಕ್ಲಬ್‌ನ ಎಂ. ವೈಷ್ಣವಿ ವಿ. ಪ್ರಭು, ಉಜಿರೆ ಶ್ರೀ ಧ.ಮಂ. ಆಸ್ಪತ್ರೆಯ ಡಾ| ಸಾತ್ವಿಕ್, ಉಡುಪಿ ಪ್ರಸಾದ್ ನೇತ್ರಾಲಯದ ಡಾ| ವಿನಯ್, ಮಂಗಳೂರು ಲೇಡಿಗೋಶನ್ ಆಸ್ಪತ್ರೆಯ ಆರೋಗ್ಯಾಧಿಕಾರಿ, ಡಾ| ಜ್ಯೋತಿ, ಉಜಿರೆ ಶ್ರೀ ಧ.ಮಂ. ಕಾಲೇಜಿನ ಪ್ರೊ| ಶಕುಂತಲಾ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ಯಾಡಿ ಸೇವಾ ಭಾರತಿಯ ಕಾರ್ಯದರ್ಶಿ ವಿನಾಯಕ ರಾವ್, ಬಜಿರೆ ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಆಚಾರಿ, ಶಿಬಿರದ ಯೋಜನಾಧಿಕಾರಿಗಳಾದ ಗಣೇಶ್ ವಿ. ಶೆಂಡ್ಯೆ ಆಶಾಕಿರಣ್, ಶಿಬಿರಾಧಿಕಾರಿಗಳಾದ ಪ್ರೊ| ಚಿದಾನಂದ, ಪ್ರೊ| ಹರೀಶ್, ಪ್ರೊ| ಪ್ರಮೋದ್ ಹಾಗೂ ಬಜಿರೆ ಶಾಲಾ ಮುಖ್ಯ ಶಿಕ್ಷಕಿ ಕಮಲಾಜಿ ಎಸ್. ಜೈನ್ ಮತ್ತಿತರರು ಉಪಸ್ಥಿತರಿದ್ದರು. ಸೇವಾಭಾರತಿ ಗ್ರಾಮ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ಸ್ವಯಂಸೇವಕಿ ಕಾವ್ಯಾ ಸ್ವಾಗತಿಸಿ, ಅಕ್ಷತಾ ವಂದಿಸಿದರು. ಭವ್ಯಾ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ಶಿಬಿರದಲ್ಲಿ ಗುಣಮಟ್ಟದ ಚಿಕಿತ್ಸೆ ಲಭ್ಯ
ತಂತ್ರಜ್ಞಾನಗಳ ಬೆಳವಣಿಗೆಯಿಂದ ಆರೋಗ್ಯ ಶಿಬಿರಗಳಲ್ಲೂ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯ. ಸೇವೆ, ಪರಿಶ್ರಮದ ಮೂಲ ಧ್ಯೇಯವನ್ನಿಟ್ಟುಕೊಂಡು ಜನ್ಮ ತಾಳಿರುವ ಎನ್ನೆಸ್ಸೆಸ್ ಯೋಜನೆ ಬದುಕಿನ ನೈಜ ಅನುಭವ ಕಲಿಸುತ್ತದೆ.
–
ಡಾ| ದಯಾಕರ್, ಸುಳ್ಯ ಕೆವಿಜಿ ದಂತ ಮಹಾ ವಿದ್ಯಾಲಯ