Advertisement
ಏನಿದು ರೈಲ್ವೇ ಗೇಟ್ ಬಂದ್ ವಿವಾದ?ಉಡುಪಿ ಜಿಲ್ಲೆಯ ಶಿರೂರು ಗ್ರಾಮ ಅತ್ಯಂತ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. 1990ರ ದಶಕದಲ್ಲಿ ಹಾದುಹೋದ ಕೊಂಕಣ ರೈಲ್ವೆ ಊರನ್ನು ಇಬ್ಭಾಗ ಮಾಡಿದೆ. ಈ ಸಂದರ್ಭದಲ್ಲಿ ಹಡವಿನಕೋಣೆ ಮತ್ತು ಕೋಟೆಮನೆಗಳ ಸಂಪರ್ಕ ಕತ್ತರಿಸಿ ಹೋಗಿದೆ. ಆಗ ಇಲ್ಲಿ ರೈಲ್ವೇ ಗೇಟ್ ಸ್ಥಾಪಿಸಿ ದಾರಿ ಮಾಡಿ ಕೊಡಲಾಯಿತು. ಒಂದೊಂದು ರೈಲು ಬರುವಾಗಲೂ ಅರ್ಧ ಗಂಟೆ ಕಾಯುವ ಪರಿಸ್ಥಿತಿ ಇದ್ದರೂ ಸಂಪರ್ಕಕ್ಕೆ ಏನೋ ವ್ಯವಸ್ಥೆ ಇದೆ ಎಂದು ನೆಮ್ಮದಿಯಾಗಿದ್ದರು.
ಶಿರೂರಿನ ಕೋಟೆಮನೆ ಭಾಗದಲ್ಲಿ ಶಿರೂರಿನ ಪ್ರಸಿದ್ಧ ದುರ್ಗಾಂಬಿಕಾ ದೇವಸ್ಥಾನವಿದೆ. 60ಕ್ಕೂ ಅಧಿಕ ಕುಟುಂಬಗಳು ನೂರಾರು ಎಕರೆ ಕೃಷಿ ಭೂಮಿ ಇದೆ.ಪ್ರಸ್ತುತ ಇಲ್ಲಿನ ಜನರು ಎಲ್.ಸಿ. -71 ಗೇಟ್ ಸಂಖ್ಯೆ ಮೂಲಕ ಸಂಚರಿಸುತ್ತಿದ್ದರು. ಪ್ರಸ್ತುತ ರೈಲ್ವೆ ಇಲಾಖೆ ಈ ಗೇಟ್ ಅನ್ನು ಮುಚ್ಚುವ ಸಿದ್ಧತೆ ನಡೆಸಿದೆ.
Related Articles
– ದೇಶದಲ್ಲಿ ಬಹುತೇಕ ಕಡೆಗಳಲ್ಲಿ ರಸ್ತೆಗಳು ರೈಲ್ವೇ ರಸ್ತೆಯನ್ನು ಹಾದುಹೋಗುತ್ತದೆ. ಇದರಿಂದ ಅತ್ಯಧಿಕ ಅಪಘಾತ ಪ್ರಕರಣಗಳಾಗಿದೆ. ನೂರಾರು ಜೀವಹಾನಿಯಾಗಿದೆ. ಇದರಿಂದಾಗಿ ಕೇಂದ್ರ ಸರಕಾರ ಇಂತಹ ರಸ್ತೆಗಳನ್ನು ಮುಚ್ಚಿ ಬದಲಿ ವ್ಯವಸ್ಥೆ ಮೂಲಕ ಸಂಪರ್ಕ ಕಲ್ಪಿಸಲು ತಿಳಿಸಿದೆ.
– ಕೊಂಕಣ ರೈಲ್ವೇ ಕೂಡ ತನ್ನ ಮಾರ್ಗದಲ್ಲಿರುವ ಗೇಟ್ಗಳನ್ನು ಮುಚ್ಚಿ ಬದಲಿ ವ್ಯವಸ್ಥೆ ನೀಡಲು ಮುಂದಾಗಿದೆ. ಗೋವಾ ಮುಂತಾದ ಕಡೆ ಸಂಸದರ ನಿಧಿ ಅಥವಾ ರಾಜ್ಯ ಸರಕಾರದ ಅನುದಾನ ಬಳಸಿ ಮೇಲ್ಸೇತುವೆ ಅಥವಾ ಅಂಡರ್ಪಾಸ್ ನಿರ್ಮಿಸಲಾಗಿದೆ. ಕೊಂಕಣ ರೈಲ್ವೇಯಲ್ಲಿ ಅನುದಾನದ ಕೊರತೆಯಿಂದ ಸುತ್ತು ಬಳಸಿ ಬರುವ ರಸ್ತೆ ನಿರ್ಮಿಸಲಾಗುತ್ತಿದೆ. ಇದು ಸಾರ್ವಜನಿಕರಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಾಗಿದೆ.
Advertisement
3 ಕಿ.ಮೀ. ಸುತ್ತು ಬಳಸುವ ಮಾರ್ಗ!ರೈಲ್ವೇ ಇಲಾಖೆ ಪ್ರಸ್ತಾವನೆ ಪ್ರಕಾರ ಈಗಿರುವ ಮಾರ್ಗವನ್ನು ಮುಚ್ಚಿ ಇಲ್ಲಿಂದ ಮೂರು ಕಿ.ಮೀ. ದೂರದ ರೈಲ್ವೇ ಮೇಲ್ಸೇತುವೆಯ ಅಡಿಭಾಗದಿಂದ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಯೋಜನೆ ಇದೆ. ಇದರಿಂದಾಗಿ ಈ ಭಾಗದ ಜನರು ಶಿರೂರು ಪೇಟೆ ಹಾಗೂ ಹೆದ್ದಾರಿ ಸಂಪರ್ಕವನ್ನೇ ಕಡಿದುಕೊಳ್ಳುವ ಆತಂಕದಲ್ಲಿದ್ದಾರೆ. ಒಂದೊಮ್ಮೆ ಈಗಿರುವ ಗೇಟ್ ಮುಚ್ಚಿದರೆ ರಾಷ್ಟ್ರೀಯ ಹೆದ್ದಾರಿ -66 ರಿಂದ ಮೂರು ಕಿ.ಮೀ ಸುತ್ತುವರೆದು ಊರು ಸೇರುವ ಸ್ಥಿತಿ ಬರಲಿದೆ. ಮಾತ್ರವಲ್ಲದೆ ವರ್ಷಂಪ್ರತಿ ನಡೆಯುವ ಐತಿಹಾಸಿಕ ಪ್ರಸಿದ್ದ ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಜಾತ್ರೆಗೆ ಕೂಡ ತೊಂದರೆಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಸೇವೆ ಪಡೆಯಲು ಕೂಡ ಸಮಸ್ಯೆ ಆಗಲಿದೆ. ಮೊದಲೇ ಕಷ್ಟದಲ್ಲಿದೆ!
ಈ ರೈಲ್ವೇ ಪ್ರದೇಶ ಕೊಂಕಣ ರೈಲ್ವೇ ವ್ಯಾಪ್ತಿಯಲ್ಲಿದೆ. ಕೊಂಕಣ ರೈಲ್ವೇ ನಿಗಮವು ಈಗಾಗಲೇ ನಷ್ಟದಲ್ಲಿದೆ. ಹೀಗಾಗಿ ಇಲ್ಲಿ ಮೇಲ್ಸೇತುವೆ ನಿರ್ಮಿಸುವುದು ಕಷ್ಟ ಸಾಧ್ಯ. ಒಂದು ವೇಳೆ ಸಂಸದರು, ಜನಪ್ರತಿನಿಧಿಗಳು ನಿಧಿಯನ್ನು ಒದಗಿಸಿದರೆ ಮೇಲ್ಸೇತುವೆ ನಿರ್ಮಿಸಬಹುದು ಎಂಬ ಅಭಿಪ್ರಾಯವನ್ನು ರೈಲ್ವೇ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ. ಸದ್ಯ ಗೇಟ್ ಬಂದ್ ಇಲ್ಲ
ಸುರಕ್ಷತಾ ದೃಷ್ಟಿಯಿಂದ ಈ ರೀತಿಯ ಬದಲಾವಣೆ ಮಾರ್ಗ ನಿರ್ಮಿಸಲಾಗುತ್ತಿದೆ. ಸ್ಥಳೀಯರ ಅಭಿಪ್ರಾಯಗಳನ್ನು ಮೇಲಧಿಕಾರಿಗಳಿಗೆ ತಿಳಿಸಲಾಗುವುದು. ಸಮರ್ಪಕ ನಿರ್ಣಯ ಬರುವವರೆಗೆ ಗೇಟ್ ಬಂದ್ ಮಾಡಲಾಗುವುದಿಲ್ಲ.
-ಸುಧಾ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ ಕೊಂಕಣ ರೈಲ್ವೇ ಮುಚ್ಚುವ ಬದಲು ಮೇಲ್ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಿ
ರೈಲ್ವೇ ಇಲಾಖೆಯ ಅಧಿಕಾರಿಗಳು ಕೋಟೆಮನೆ ಗೇಟ್ ಮುಚ್ಚುವ ಪ್ರಸ್ತಾವನೆ ಮೇಲಧಿಕಾರಿಗಳಿಗೆ ರವಾನಿಸಿದ್ದು ಸದ್ಯದಲ್ಲೇ ಕಾಮಗಾರಿ ಆರಂಭಿಸುವ ತರಾತುರಿಯಲ್ಲಿದ್ದಾರೆ. ಏಕಾಏಕಿ ಪ್ರಮುಖ ಗೇಟ್ ಮುಚ್ಚುವ ಬದಲು ಮೇಲ್ಸೇತುವೆ ನಿರ್ಮಿಸುವ ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲಿನ ನಾಗರಿಕರು ಈಗಾಗಲೇ ಸಚಿವರು, ಸಂಸದರು, ಶಾಸಕರಿಗೆ ಮನವಿ ನೀಡಿದ್ದಾರೆ. -ಅರುಣ ಕುಮಾರ ಶಿರೂರು