ಬೈಲಹೊಂಗಲ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರಸ್ತೆ ರಿಪೇರಿ ಮಾಡಿದ ಕೆಲವೇ ದಿನಗಳಲ್ಲಿ ತಗ್ಗುದಿನ್ನೆಗಳಿಂದ ಜನತೆ ಬೇಸತ್ತು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚ ಮಾಡಿ ಕಾಂಕ್ರೀಟ್ ರಸ್ತೆ ಕಾಮಗಾರಿಕೈಗೊಳ್ಳಲಾಗಿತ್ತು. ಕಾಮಗಾರಿ ಕೈಗೊಂಡ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟು ತಗ್ಗು ದಿನ್ನೆಗಳಾಗಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ಗುತ್ತಿಗೆದಾರರ ಇಎಂಡಿ ಹಣದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವ ಭರವಸೆನೀಡುತ್ತಾರೆ. ಆದರೆ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶಿಸುತ್ತಾರೆ. ಕೇಂದ್ರ ಬಸ್ ನಿಲ್ದಾಣದ ಅಕ್ಕಪಕ್ಕದ ರಸ್ತೆಗಳು ಸಿಮೆಂಟ್ ಕಾಂಕ್ರೀಟ್ ಕಾಮಗಾರಿ ಕೈಗೊಂಡಒಂದೇ ವರ್ಷದಲ್ಲಿ ಕಿತ್ತಿರುವುದಕ್ಕೆ ವಾರ್ಡಿನ ನಾಗರಿಕರು ಕಾಮಗಾರಿ ನಿರ್ವಹಣೆ ಮಾಡಿದಭೂಸೇನಾ ನಿಗಮದ ಅಧಿ ಕಾರಿ, ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕೋರ್ಟ್ ಪಕ್ಕದ ವಿನಾಯಕನಗರ, ಪ್ರಭುನಗರ 2,5,6 ನೇ ಕ್ರಾಸ್, ಹರಳಯ್ಯಕಾಲೋನಿ ರಸ್ತೆಯಲ್ಲಿ ತಗ್ಗು ದಿನ್ನೆಗಳಿಂದ ಬೈಕ್,ವಾಹನ ಸವಾರರಿಗೆ ತೊಂದರೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಜನರುಸಂಚರಿಸುತ್ತಾರೆ. ಇಂಥ ಕಳಪೆ ಕಾಮಗಾರಿಯಿಂದ ಜನರು ಬೇಸತ್ತಿದ್ದಾರೆ.
ಹರಳಯ್ಯ ಕಾಲೋನಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ತ್ಯಾಜ್ಯವಸ್ತು, ಕಸಕಡ್ಡಿಬೆಳೆದು ನಿಂತು, ನ್ಯಾಯಾಲಯಕ್ಕೆ ಬರುವವವರುಗಬ್ಬು ವಾಸನೆಯಿಂದ ಕಂಗೆಟ್ಟಿದ್ದಾರೆ. ಕಳೆದ ಹಲವುವರ್ಷಗಳಿಂದ ರಸ್ತೆ, ಗಟಾರು ದುರವಸ್ಥೆಯಿಂದಜನತೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಪಟ್ಟಣದಮಡಿವಾಳೇಶ್ವರ ದೇವಸ್ಥಾನದ ಹತ್ತಿರದ ರಸ್ತೆ,ಸಮರ್ಪಕವಾದ ಗಟಾರು ಇಲ್ಲದ ಕಾರಣಚರಂಡಿ ನೀರು ಸರಾಗವಾಗಿ ಸಾಗದೇ ರಸ್ತೆಮೇಲೆ ಹರಿದಾಡಿ, ಗಬ್ಬೆದ್ದು ನಾರುತ್ತಿದ್ದು, ರೋಗರುಜಿನಗಳ ತಾಣವಾಗಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ರಸ್ತೆ ಕಾಮಗಾರಿ ಪರೀಶಿಲಿಸಿ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕೆಂದುಒತ್ತಾಯಿಸಿದ್ದಾರೆ.
ಹರಳಯ್ಯ ಕಾಲೋನಿ ಪಕ್ಕದಲ್ಲಿ ಕೋರ್ಟ್, ಪೊಲೀಸ್ ಇಲಾಖೆ ಕಚೇರಿಗಳಿದ್ದು, ನಿತ್ಯ ನೂರಾರು ನಾಗರಿಕರು ಬರುತ್ತಾರೆ. ಈ ರಸ್ತೆಉದ್ದಕ್ಕೂ ತಗ್ಗುಗಳಾಗಿವೆ. ಗಟಾರು ಸ್ವತ್ಛತೆ ಕಾಣದೇ ತ್ಯಾಜ್ಯ, ಕಸಕಡ್ಡಿಗಳ ಸಂಗ್ರಹತಾಣವಾಗಿದೆ. ಈ ಕುರಿತು ಅಧಿಕಾರಿಗಳಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ .
-ಶ್ರೀಶೈಲ ಕಟ್ಟಿಮನಿ, ಸ್ಥಳೀಯರು
ಬಸ್ ನಿಲ್ದಾಣದ ಅಕ್ಕಪಕ್ಕ ರಸ್ತೆಗಳು ಬೇರೆ ಇಲಾಖೆ ಕಾಮಗಾರಿ ಕೈಗೊಂಡಿದ್ದು,ಅವುಗಳನ್ನು ಪರಿಶೀಲಿಸಿ ಕಳಪೆ ಕಾಮಗಾರಿಎಂದು ಕಂಡು ಬಂದಲ್ಲಿ ಗುತ್ತಿಗೆದಾರನಇಎಂಡಿ ಹಣದಲ್ಲಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲಾಗುತ್ತದೆ. ಹರಳಯ್ಯ ಕಾಲೋನಿ,ಪ್ರಭು ನಗರ, ಮಡಿವಾಳೇಶ್ವರ ನಗರ ರಸ್ತಗೆಳಿಗೆನಗರೋತ್ಥಾನ ಯೋಜನೆಯಡಿ ಕಾಮಗಾರಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ.
– ಕೆ.ಐ. ನಾಗನೂರ, ಪುರಸಭೆ ಮುಖ್ಯಾಧಿಕಾರಿ.