ಬೈಲಹೊಂಗಲ: ಪಟ್ಟಣದ ಮೌಲಾನಾ ಅಬ್ದುಲ್ ಕಲಾಮ್ ಆಝಾದ ಹೈಸ್ಕೂಲ್ ಉಳಿಸಿ, ಬೆಳೆಸುವಲ್ಲಿ ಹಳೆಯ ವಿದ್ಯಾರ್ಥಿಗಳ
ಸಂಘ ಅತ್ಯುತ್ತಮ ಕಾರ್ಯ ಮಾಡುತ್ತಿದೆ. ಶಾಲೆಯ ಅಭಿವೃದ್ಧಿಯ ಚಿಂತನೆ ಮಾಡಬೇಕಾಗಿದೆ ಎಂದು ಕರ್ನಾಟಕ ಉರ್ದು
ಅಕಾಡೆಮಿ ನಿರ್ದೇಶಕ ಶರೀಫ ಮೊಕಾಶಿ, ಹಳೆಯ ವಿದ್ಯಾರ್ಥಿ ನಜೀರ ತೊಲಗಿ ಹೇಳಿದರು.
Advertisement
ಪಟ್ಟಣದ ಇಂಚಲ ರಸ್ತೆಯ ಈದ್ಗಾ ಮೈದಾನದಲ್ಲಿರುವ ಮೌಲಾನಾ ಅಬ್ದುಲ್ ಕಲಾಮ ಆಝಾದ ಹೈಸ್ಕೂಲ್ ಸ್ಟುಡೆಂಟ್ಅಲ್ಯಮಿನಿ ಅಸೋಷಿಯನ್ ಏರ್ಪಡಿಸಿದ್ದ ವಾರ್ಷಿಕ ಸಭೆ ಹಾಗೂ ಮುಸ್ಲಿಂ ಸಮಾಜದ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.
Related Articles
ವಿದ್ಯಾರ್ಥಿಗಳ ಸಂಘದಿಂದ ಯಾವುದೇ ಅಧ್ಯಕ್ಷ, ಕಮೀಟಿ ಮಾಡುವುದಿಲ್ಲ. ನಮ್ಮ ಮುಖ್ಯ ಉದ್ದೇಶ ಶಾಲೆಯ ಅಭಿವೃದ್ಧಿ. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
Advertisement
ಮುಸ್ಲಿಂ ಸಮಾಜದ ಮುಖಂಡರು ಎರಡು ಕಮೀಟಿಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಅಂಜುಮನ್ ಎ-ಇಸ್ಲಾಂಕಮಿಟಿಯವರು ಸೂಕ್ತ ನಿರ್ಧಾರ ಮಾಡಿ, ಶಾಲೆಯನ್ನು ಉಳಿಸಬೇಕು ಎಂದು ಸಲಹೆ ನೀಡಿದರು. ಎರಡು ಕಮೀಟಿಯವರು
ರಾಜೀನಾಮೆ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು. ನಂತರ ಒಂದು ಕಮೀಟಿಯ ಅಬ್ದುಲರೆಹಮಾನ ನಂದಗಡ, ಬಾಬಾಸಾಬ ಸುತಗಟ್ಟಿ, ಹಾರೂನ್ ಕಿತ್ತೂರ, ಸಮೀವುಲ್ಲಾ ನೇಸರಗಿ, ನಜೀರ ಕಿತ್ತೂರ ರಾಜೀನಾಮೆ ನೀಡಿದರು. ಇನ್ನೊಂದು ಕಮೀಟಿಯ 11 ಜನ ಸದಸ್ಯರಲ್ಲಿ ಅಧ್ಯಕ್ಷರು ಹಾಗೂ ಇನ್ನಿಬ್ಬರು ಮಾತ್ರ ರಾಜೀನಾಮೆ ನೀಡಿದ್ದು, ಉಳಿದವರ ರಾಜೀನಾಮೆ ಪಡೆಯುವುದಾಗಿ ಅಂಜುಮನ್ ಎ-ಇಸ್ಲಾಂ ತಿಳಿಸಿದೆ. ಅಂಜುಮನ್ ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಡಾ.ಐಜಾಜ ಬಾಗೇವಾಡಿ, ಇಮ್ತಿಯಾಜ ನೇಸರಗಿ, ಮದರಸಾದ ಮುಖ್ಯಸ್ಥ ಶೌಕತಲಿ
ಬಾದಿ, ಪುರಸಭೆ ಉಪಾಧ್ಯಕ್ಷ ಬುಡ್ಡೆಸಾಬ ಶಿರಸಂಗಿ, ಶಬ್ಬೀರ ಕುದರಿ, ಅಣ್ಣಾಸಾಹೇಬ ಮಾನೂರಶೇಖ, ಜಮೀಲಹ್ಮದ ಸಂಗೊಳ್ಳಿ,
ಇಮಾಮಸಾಬ ನದಾಫ, ಮೌಲಾನಾ ಅಕೀಲ್, ಬುಡ್ಡೆಸಾಬ ದಾಸ್ತಿಕೊಪ್ಪ, ಮಹ್ಮದಷಾ ನದಾಫ, ರಿಯಾಜಹ್ಮದ ಮಿರ್ಜನ್ನವರ ಸೇರಿದಂತೆ ಸಮಾಜದದವರು ಉಪಸ್ಥಿತರಿದ್ದರು.