Advertisement
ಮಳೆಗಾಲದಲ್ಲಿ ಹೊಂಡ ಬೀಳುವುದು ಸಾಮಾನ್ಯ. ಆದರೆ ತಾತ್ಕಾಲಿಕ ಹೊಂಡ ಮುಚ್ಚಲೂ ಹೆದ್ದಾರಿ ಇಲಾಖೆ ಇದುವರೆಗೆ ಪ್ರಯತ್ನ ನಡೆಸಿಲ್ಲ. ಹೀಗಾಗಿ ಹೊನ್ನಕಟ್ಟೆ ವೃತ್ತ ಹಾಗೂ ಬೈಕಂಪಾಡಿ ಕೈಗಾರಿಕಾ ಪ್ರದೇಶದ ವೃತ್ತದಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿ ಸಣ್ಣ ವಾಹನಗಳು ಚಲಿಸಲಾಗದಷ್ಟು ಪ್ರಮಾಣದಲ್ಲಿ ದೊಡ್ಡ ದಾಗುತ್ತಾ ಹೋಗುತ್ತಿವೆ.
ಹೊಂಡ ತಪ್ಪಿಸುವ ಭರದಲ್ಲಿ ವಾಹನಗಳು ದಿಢೀರನೇ ತಿರುಗುವ ಕಾರಣ ಎಲ್ಲಿ ಅಪ ಘಾತವಾಗುವುದೋ ಎಂದು ಭಯಪಡುವಂತಾಗಿದೆ. ಈ ಪ್ರದೇಶಗಳು ತಿರುವು ಮುರುವು ರಸ್ತೆ ಹೊಂದಿದ್ದು, ಹೊಂಡದ ಅರಿವಿಲ್ಲದೆ ಅಪಾಯ ಮೈಮೇಲೆ ಎಳೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಮಳೆಗಾಲದಲ್ಲಿ ಹೊಂಡ ತುಂಬ ನೀರು ನಿಂತು ಆಳ ತಿಳಿಯದೆ ಘನ ವಾಹನಗಳು ಸಿಲುಕಿಕೊಳ್ಳುತ್ತಿವೆ. ತತ್‌ಕ್ಷಣ ತಾತ್ಕಾಲಿಕ ನೆಲೆಯಲ್ಲಾದರೂ ಹೊಂಡ ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ್ ದೇವಾಡಿಗ ಇಡ್ಯಾ ಒತ್ತಾಯಿಸಿದ್ದಾರೆ. ಹೊಂಡಗಳಿಂದ ಕೂಡಿದ ರಸ್ತೆ.