Advertisement

ಬೈಕಂಪಾಡಿ: ಒಳಚರಂಡಿ ಕಾಮಗಾರಿ ಅಪೂರ್ಣ, ಸ್ಥಳೀಯ ನಿವಾಸಿಗಳಿಗೆ ನಿತ್ಯ ಸಮಸ್ಯೆ

03:59 PM Mar 21, 2022 | Team Udayavani |

ಬೈಕಂಪಾಡಿ : ಇಲ್ಲಿನ 10ನೇ ವಾರ್ಡ್‌ನ ವಿದ್ಯಾರ್ಥಿ ಭವನದ ಸುತ್ತಮುತ್ತ ಒಳಚರಂಡಿ ಕಾಮಗಾರಿ ಅಪೂರ್ಣವಾಗಿದ್ದು, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯನ್ನುಂಟು ಮಾಡಿದೆ.

Advertisement

ಚರಂಡಿ ವ್ಯವಸ್ಥೆ ಮಾಡಿ ಸೂಕ್ತವಾಗಿ ಸಂಪರ್ಕ ನೀಡದಿರುವುದರಿಂದ ಖಾಸಗಿ ಗದ್ದೆ, ಖಾಲಿ ಜಾಗಗಳಿಗೆ ಹರಿಯುತ್ತಿದ್ದು, ಇದನ್ನು ಮುಚ್ಚ ಲಾಗಿದೆ. ಇದೀಗ ನಿತ್ಯ ಟ್ಯಾಂಕರ್‌ನಲ್ಲಿ ತ್ಯಾಜ್ಯ ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯವಿದೆ. 10ನೇ ವಾರ್ಡ್‌ ಸಮೀಪವೇ ಬೃಹತ್‌ ರಾಜಕಾಲುವೆ ಹರಿಯುತ್ತಿದ್ದು, ವಿವಿಧೆ ಡೆಯಿಂದ ಇದಕ್ಕೆ ಸಂಪರ್ಕ ನೀಡಲಾಗಿದ್ದು, ಈ ಭಾಗದಲ್ಲಿ ಸಂಪರ್ಕ ನೀಡಲಾಗಿಲ್ಲ. ಕಾಂಕ್ರೀಟ್‌ ರಸ್ತೆ, ನೇರವಾಗಿ ಒಳಚರಂಡಿ ಪೈಪ್‌ಗ್ಳನ್ನು ಅಳವಡಿಸಲು ಕಷ್ಟಸಾಧ್ಯವಾದ ಕಾರಣ ಈ ಹಿಂದೆ ಅನುದಾನ ಒದಗಿಸಿದ ಸ್ಥಳದಲ್ಲಿ ಮಾತ್ರ ತೋಡು ಮಾಡಿ ಬಿಡಲಾಗಿತ್ತು. ಈ ಬಾರಿ ಅಮೃತ್‌ ಯೋಜನೆಯಲ್ಲಿ ಗುರುತಿಸಲಾದ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅನುದಾನ ಮೀಸಲಿಡಲಾಗಿಲ್ಲ.

ವಿಶೇಷ ಅನುದಾನ ಒದಗಿಸಲು ಮನವಿ
10ನೇ ವಾರ್ಡ್‌ನಲ್ಲಿ ಒಳಚರಂಡಿ ಪೂರ್ತಿ ಮಾಡಲು ಈ ಸಲದ ಅಮೃತ್‌ ಯೋಜನೆಯ ಅನುದಾನ ಒದಗಿಸಲಾಗಿಲ್ಲ. ಇಲ್ಲಿನ ಒಳಚರಂಡಿ ಯೋಜನೆಗೆ ಕನಿಷ್ಠ 10-15 ಲಕ್ಷ ರೂ. ಅನುದಾನ ಅಗತ್ಯವಿದ್ದು, ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರಲ್ಲಿ ಮನವಿ ಸಲ್ಲಿಸಿ ವಿಶೇಷ ಅನುದಾನ ಒದಗಿಸುವಂತೆ ಕೋರಲಾಗುವುದು. ಇದೀಗ ಟ್ಯಾಂಕರ್‌ ವ್ಯವಸ್ಥೆ ಮಾಡಿ ತ್ಯಾಜ್ಯ ನೀರು ಸಾಗಿಸಲು ಕ್ರಮ ಕೈಗೊಂಡಿದ್ದೇನೆ.
-ಸುಮಿತ್ರಾ ಕರಿಯ, ಮನಪಾ ಸದಸ್ಯರು

ಇದನ್ನೂ ಓದಿ : ಪಾವಗಡ ಬಸ್ ಅಪಘಾತ: 25 ಲಕ್ಷ ರೂ. ಪರಿಹಾರಕ್ಕೆ ಖಾದರ್ ಆಗ್ರಹ 

Advertisement

Udayavani is now on Telegram. Click here to join our channel and stay updated with the latest news.

Next