Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಆತಿಥ್ಯಕ್ಕೆ ಸಿದ್ಧ: ಬಿಎಐ

12:59 AM Apr 29, 2020 | Sriram |

ಹೊಸದಿಲ್ಲಿ: ಕೋವಿಡ್-19 ರೋಗ ನಿಯಂತ್ರಣಕ್ಕೆ ಬಂದರೆ ಮತ್ತು ಸರಕಾರ ಅನುಮತಿ ನೀಡಿದರೆ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ (ಬಿಎಐ) ಈ ವರ್ಷದ ಡಿಸೆಂಬರ್‌ ಅಥವಾ ಜನವರಿಯಲ್ಲಿ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಆತಿಥ್ಯ ವಹಿಸಲು ಸಿದ್ಧವಿದೆ.

Advertisement

ಬಿಡಬ್ಲ್ಯುಎಫ್ ವಿಶ್ವ ಟೂರ್‌ ಸೂಪರ್‌ 500 ಕೂಟ ಆಯೋಜಿಸಲು ದಿನ ಸೂಚಿಸುವಂತೆ ಬ್ಯಾಡ್ಮಿಂಟನ್‌ ವಿಶ್ವ ಫೆಡರೇಶನ್‌ (ಬಿಡಬ್ಲ್ಯುಎಫ್) ಕಳೆದ ವಾರ ಬಿಎಐಗೆ ಪತ್ರ ಬರೆದಿತ್ತು. ಇಂಡಿಯಾ ಓಪನ್‌ ಕಳೆದ ತಿಂಗಳು ನಡೆಯಬೇಕಿತ್ತು. ಆದರೆ ಕೋವಿಡ್-19 ರೋಗದಿಂದಾಗಿ ಇಂಡಿಯಾ ಓಪನ್‌ ಸಹಿತ ಹಲವು ಬ್ಯಾಡ್ಮಿಂಟನ್‌ ಕೂಟಗಳು ಮುಂದೂಡಲ್ಪಟ್ಟಿದ್ದವು. ಇವುಗಳಲ್ಲಿ ಟೋಕಿಯೊ ಗೇಮ್ಸ್‌ ಅರ್ಹತಾ ಕೂಟಗಳು ಕೂಡ ಸೇರಿದ್ದವು.

ಈ ಸಂಬಂಧ ಬಿಎಐ ಎರಡು ಸಮಯದಲ್ಲಿ ಕೂಟದ ಆತಿಥ್ಯ ವಹಿಸುವ ನಿರ್ಧಾರವನ್ನು ಬಿಡಬ್ಲ್ಯುಐಗೆ ತಿಳಿಸಿದೆ. ಸರಕಾರದ ಅನುಮತಿ ಸಿಕ್ಕಿದರೆ ಇಂಡಿಯಾ ಓಪನ್‌ ಆಯೋ ಜಿಸಲು ನಾವು ಸಿದ್ಧರಿದ್ದೇವೆ ಎಂದು ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್‌ ಕೆ. ಸಿಂಘಾನಿಯ ತಿಳಿಸಿದ್ದಾರೆ.

ಯುಎಸ್‌ ಓಪನ್‌ ರದ್ದು
ಕೋವಿಡ್-19 ರೋಗದಿಂದಾಗಿ ಜೂನ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಬೇಕಾಗಿದ್ದ ಯುಎಸ್‌ ಓಪನ್‌ ವಿಶ್ವ ಟೂರ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಕೂಟವನ್ನು ರದ್ದುಮಾಡಲಾಗಿದೆ ಎಂದು ಬ್ಯಾಡ್ಮಿಂಟನ್‌ ವಿಶ್ವ ಫೆಡರೇಶನ್‌ (ಬಿಡಬ್ಲ್ಯುಎಫ್) ತಿಳಿಸಿದೆ. ಯುಎಸ್‌ಎ ಬ್ಯಾಡ್ಮಿಂಟನ್‌ ಸಂಸ್ಥೆಯೊಂದಿಗೆ ಚರ್ಚೆ ನಡೆಸಿದ ಬಳಿಕ ಕೂಟವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು ಎಂದು ಬಿಡಬ್ಲ್ಯುಎಫ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next