Advertisement

ಏತ ನೀರಾವರಿ ಕಾಮಗಾರಿಗಳಿಗೆ ಚುರುಕು

08:22 PM Dec 01, 2020 | Suhan S |

ಚನ್ನರಾಯಪಟ್ಟಣ: ಜಿಲ್ಲೆಯಲ್ಲಿ ಯಾವುದಾದರೂ ಏತ ನೀರಾವರಿ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದ್ದರೆ ಅಥವಾ ಮಂದಗತಿಯಲ್ಲಿ ಸಾಗುತ್ತಿದ್ದರೆ ಚುರುಕುಗೊಳ್ಳಲು ಕ್ರಮ ಕೈಗೊಳ್ಳುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.

Advertisement

ಹಿರೀಸಾವೆ-ಜುಟ್ಟನಹಳ್ಳಿ ಏತನೀರಾವರಿ ಯೋಜನೆಯಡಿ ತುಂಬಿದ ತಾಲೂಕಿನ ಹಿರೀಸಾವೆ ಹೋಬಳಿ ಮತಿಘಟ್ಟ ಗ್ರಾಮದ ಕೆರೆಗೆ ಸೋಮವಾರ ಗಂಗಾ ಪೂಜೆ,ಬಾಗಿನ ಸಮರ್ಪಿಸಿ ಮಾತನಾಡಿದರು. ನನ್ನ ಸ್ವಕ್ಷೇತ್ರಮಹಾಲಕ್ಷ್ಮೀ ಲೇಔಟ್‌ಒಂದುಕಣ್ಣಾದರೆ, ಹಾಸನ ಜಿಲ್ಲೆ ಮತ್ತೂಂದು ಕಣ್ಣು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ತರುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ವಿವರಿಸಿದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡ ವೇಳೆ “ಚುನಾವಣೆಯ ಗಿಮಿಕ್‌’ ಎಂದು ಕೆಲವರು ಹೇಳಿದ್ದರು. ಈ ಬಗ್ಗೆ ಜನರಲ್ಲಿ ಮೂಡಿಸಿದ್ದ ಗೊಂದಲಗಳಿಗೆ ಈಗ ತೆರೆ ಎಳೆಯಲಾಗಿದೆ. ಚುನಾವಣೆಗಾಗಿ ಗಿಮಿಕ್‌ಮಡುವ ಜಾಯಮಾನ ನಮ್ಮದಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಜಿಲ್ಲೆಯಲ್ಲಿ ಬಹುತೇಕ ಏತನೀರಾವರಿ ಯೋಜನೆ ಗಳನ್ನು ಪೂರ್ಣಗೊಳಿಸಿ ನೂರಾರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಪಪ್ರಚಾರ ಮಾಡವವರ ಬಾಯಿ ಮುಚ್ಚಿಸಲಾಗಿದೆ. ರೈತರ ಶ್ರೇಯೋಭಿ ವೃದ್ಧಿಯೇ ನಮ್ಮ ಮಂತ್ರವಾಗಿದೆ ವಿನಃ, ಬೇರೆ ಇನ್ಯಾವುದೂ ನಮಗೆ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಎರಡು ವರ್ಷದಲ್ಲಿ ಕನಸು ನನಸು: ತಾಲೂಕಿನ ದಿಡಗ ಹಾಗೂ ಕಬ್ಬಳಿ ವ್ಯಾಪ್ತಿಯಲ್ಲಿನ ನೀರಿನ ಬವಣೆಯ ಬಗ್ಗೆ ಆ ಭಾಗದ ಯುವಕರು ಸಾಮಾಜಿಕಜಾಲತಾಣಗಳಲ್ಲಿ ನೋವು ಹಂಚಿಕೊಂಡಿರುವುದನ್ನು ಗಮನಿಸಿದ್ದೇನೆ. ದಿಡಗ-ಕಬ್ಬಳಿ ವ್ಯಾಪ್ತಿಯ 26

Advertisement

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದು ಪ್ರಸ್ತಾವನೆ ಸಿದ್ಧವಾಗುತ್ತಿದೆ. ಅಂದು ಕೊಂಡಂತೆಯೇ ನಡೆದರೆ, ಇನ್ನೆರೆಡು ವರ್ಷಗಳಲ್ಲಿ ಆ ಭಾಗದ ರೈತರ ಕನಸು ನನಸಾಗಲಿದೆ ಎಂದು ಭರವಸೆ ನೀಡಿದರು. ಸಿದ್ದು ಹಣಬಿಡುಗಡೆ ಮಾಡಿದ್ರು: ವಿಧಾನ ಪರಿಷತ್‌ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಮಾಜಿಸಚಿವ ಎಚ್‌.ಸಿ.ಶ್ರೀಕಂಠಯ್ಯ ಸೇರಿದಂತೆ ಈ ಭಾಗದ ರಾಜಕೀಯ, ರೈತ ಮುಖಂಡರ ಹೋರಾಟದ ಫ‌ಲ ವಾಗಿ ಈಗ ಕೆರೆಗಳಿಗೆ ನೀರು ತುಂಬುತ್ತಿದೆ. ಕಾಂಗ್ರೆಸ್‌ ನಾಯಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂ ಡರು ಪಾದಯಾತ್ರೆ ಮಾಡಿ ಏತನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಒತ್ತಡ ತಂದಿದ್ದರಿಂದಹಿರೀಸಾವೆ-ಜುಟ್ಟನಹಳ್ಳಿಏತನೀರಾವರಿಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ಹಣಬಿಡುಗಡೆ ಮಾಡಿದ್ದರು ಎಂದು ವಿವರಿಸಿದರು.

ರಾಜ್ಯ ಜೆಡಿಎಸ್‌ ಉಪಾಧ್ಯಕ್ಷ ಎಚ್‌.ಜಿ.ರಾಮಕೃಷ್ಣ, ತಾಲೂಕು ಅಧ್ಯಕ್ಷ ದೇವರಾಜೇಗೌಡ, ಜಿಪಂ ಸದಸ್ಯರಾದ ಸಿ.ಮಂಜೇಗೌಡ, ಮಮತಾ ರಮೇಶ್‌,ತಾಪಂ ಅಧ್ಯಕ್ಷೆ ಶ್ಯಾಮಲಾ ಉದಯಕುಮಾರ್‌,ಬಿಜೆಪಿ ತಾಲೂಕು ಅಧ್ಯಕ್ಷ ಚೆನ್ನಕೇಶವ, ತಹಶೀಲ್ದಾರ್‌ ಜೆ.ಬಿ.ಮಾರುತಿ, ಜಿಪಂ ಉಪ ಕಾರ್ಯದರ್ಶಿ ಮಹೇಶ್‌, ಪ್ರಮುಖರಾದ ಪಟೇಲ್‌ ಮಂಜುನಾಥ್‌, ಮಹೇಶ್‌, ಕಾರ್ಯಪಾಲಕ ಎಂಜಿನಿಯರ್‌ ಗುಂಡಪ್ಪ. ಎಇಇ ಉಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next