ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲ ಬೇಕೆಂದರೆ ಹೊಸ ಮುಖಗಳನ್ನು ಕಣಕ್ಕೆ ಇಳಿಸಲು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಾಗೇಪಲ್ಲಿ- ಗುಡಿಬಂಡೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಪಕ್ಷದ ಅಭ್ಯರ್ಥಿ ಡಿ.ಜೆ.ನಾಗರಾಜರೆಡ್ಡಿ ಎಂದು ಘೋಷಣೆ ಮಾಡಿದ್ದು, ಅವರನ್ನು ಬದಲಿಸುವಂತೆ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿದ್ದಾರೆ.
“ಪಂಚರತ್ನ’ ಯಾತ್ರಾ ಸಮಯದಲ್ಲಿ ಡಿ.ಜೆ.ನಾಗರಾಜರೆಡ್ಡಿ ಅವರೇ ಪಕ್ಷದ ಅಭ್ಯರ್ಥಿ ಎಂದು ಹೇಳಿದ್ದೀರಿ, ಅವರು ನಿಷ್ಠಾವಂತ ಕಾರ್ಯಕರ್ತ ರನ್ನು ಕಡೆಗಣಿಸುತ್ತ, ಪಕ್ಷ ಬಲಪಡಿಸುವಲ್ಲಿ ವಿಫಲರಾಗಿರುವುದರಿಂದ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಸ್ಪ ರ್ಧಿಸಿ ಸೋತಿದ್ದ ಹರಿ ನಾಥರೆಡ್ಡಿ ಅಥವಾ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಈ ಭಾಗದಲ್ಲಿ ಕಣಕ್ಕೆ ಇಳಿಸಲು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.
ಎಚ್ಚರಿಕೆ ಸಂದೇಶ ರವಾನೆ: ಒಟ್ಟಾರೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ನಾನೇ ಎಂದು ಹೇಳಿಕೊಳ್ಳುತ್ತಿದ್ದ ಡಿ.ಜೆ.ನಾಗ ರಾಜರೆಡ್ಡಿಗೆ ಈ ಸಭೆಯಿಂದ ಎಚ್ಚರಿಕೆ ಸಂದೇಶ ರವಾನೆ ಆದಂತೆ ಆಗಿದ್ದು, ಕೊನೆ ಕ್ಷಣದಲ್ಲಿ ದೊಡ್ಡಗೌಡರ ಕೃಪೆ ಬಾಗೇಪಲ್ಲಿಗೆ ಶಾಸಕ ನಾಗಬೇಕೆಂಬ ಮಹದಾಸೆಯಿಂದ ಕ್ಷೇತ್ರದಲ್ಲಿ ಓಡಾಡುತ್ತಿರುವ ಡಿ. ಜೆ.ನಾಗರಾಜರೆಡ್ಡಿಗೆ ಅಥವಾ ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ್ತಿದ್ದ ಹರಿನಾಥರೆಡ್ಡಿಗೆ, ಇಲ್ಲಾ ಇವರಿಬ್ಬರಿಗೂ ಟಿಕೆಟ್ ಕೈತಪ್ಪಿ ಹೊಸ ಮುಖ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಾರೋ ಕಾದು ನೋಡಬೇಕಾಗಿದೆ.
ಒಡೆದ ಮನೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಈಗ ಒಡೆದ ಮನೆಯಾಗಿದ್ದು, ನಾಗರಾಜರೆಡ್ಡಿ ಕಾರ್ಯಕರ್ತರನ್ನು ನಿರ್ಲಕ್ಷಿಸು ತ್ತಿರುವುದರಿಂದ ಮೂಲ ಜೆಡಿಎಸ್ ಬಣ, ನಾಗರಾಜರೆಡ್ಡಿ ಬಣ ಆಗಿ ವಿಂಗಡಣೆ ಆಗಿ ಒಡೆದ ಮನೆ ಆಗಿದೆ.
ಅನಿತಾ, ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಲು ಮನವಿ ಮಾಡಿದ್ದೇವೆ : ಈಗಾಗಲೇ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿರುವ ಡಿ.ಜೆ.ನಾಗರಾಜರೆಡ್ಡಿ ಅವರು ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತ ಬಂದಿದ್ದಾರೆ. ಇದರಿಂದಾಗಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಪಕ್ಷ ಗೆಲ್ಲುವುದು ಕಷ್ಟವಾಗುತ್ತದೆ. ಕೂಡಲೇ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರಲ್ಲಿ ಒಬ್ಬರನ್ನು ಕ್ಷೇತ್ರದಿಂದ ಕಣಕ್ಕೆ ಇಳಿಸಬೇಕು. ಆಗ ಅವರನ್ನು ಗೆಲ್ಲಿಸಿ ವಿಧಾನಸಭೆ ಕಳುಹಿಸುತ್ತೇವೆ. ಇದರಿಂದಾಗಿ ಅವಳಿ ಜಿಲ್ಲೆಗಳಲ್ಲಿ ಪಕ್ಷ ಬಲವರ್ಧನೆಗೆ ಸಹಾಯ ಆಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ಗುಡಿಬಂಡೆ ತಾಲೂಕು ಜೆಡಿಎಸ್ ಅಧ್ಯಕ್ಷ ಮಂಜುನಾಥರೆಡ್ಡಿ ಹೇಳಿದರು.