Advertisement

ಬಾಗೇಪಲ್ಲಿ: ವ್ಯಕ್ತಿ ಕೊಲೆಗೈದಿದ್ದ ನಾಲ್ವರ ಬಂಧನ

01:21 PM Oct 06, 2020 | Suhan S |

ಬಾಗೇಪಲ್ಲಿ: ಅನೈತಿಕ ಸಂಬಂಧ ಹಿನ್ನಲೆ ಉತ್ತರಪ್ರದೇಶದ ರಾಜ್‌(35) ಎಂಬಾತನನ್ನು ಕೊಲೆಮಾಡಿದ ಪ್ರಕರಣ ಭೇದಿಸುವಲ್ಲಿ  ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದರು.

Advertisement

ಸೋಮುವಾರ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಪೀಣ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೃತ ರಾಜ್‌ಗೂ ಕುಖ್ಯಾತ ರೌಡಿ ಸಲೀಂ ಪತ್ನಿ ಶಹೀನಾಗೂ ಅನೈತಿಕ ಸಂಬಂಧವಿತ್ತು.ಇದರಿಂದ ರೌಡಿ ಸಲೀಂ ಬಾಗೇಪಲ್ಲಿ ಪಟ್ಟಣದ ನಾರಾಯಣಸ್ವಾಮಿ, ಚೇತನ್‌ ಕುಮಾರ್‌, ವಿನೋದ ಕುಮಾರ್‌, ಬಾಲಚಂದ್ರ ಜತೆ ಸೇರಿ ರಾಜ್‌ನನ್ನು ಕೊಲೆ ಮಾಡಲು ಪ್ಲಾನ್‌ ಹಾಕಿ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಚಿಲಮತ್ತೂರು ಗ್ರಾಮದ ಪತ್ನಿ ಶಹೀನಾ ಕೈಯಲ್ಲಿ ರಾಜ್‌ಗೆ ಕರೆ ಮಾಡಿಸಿ ಚಿಕ್ಕಬಳ್ಳಾಪುರ ಆರ್‌ಟಿಒ ಕಚೇರಿ ಬಳಿಕರೆಸಿ ಕಾರಿನ ಚಾಲಕನಂತೆ ನಟಿಸುತ್ತಿದ್ದ ಶಹೀನಾ ಪತಿ ಸಲೀಂ 4 ಸಹಚರರೊಂದಿಗೆ ರಾಜ್‌ನನ್ನು ಕಾರಿನಲ್ಲಿಕೂರಿಸಿಕೊಂಡು ಬಾಗೇಪಲ್ಲಿ ಪಟ್ಟಣದ ಹೊರವಲಯದ ಪರಗೋಡು ಸಮೀಪ ಚಿತ್ರಾ ವತಿ ಬ್ಯಾರೇಜ್‌ ಬಳಿ ಕರೆದುಕೊಂಡು ಡ್ಯಾಗರ್‌, ಚಾಕು, ಚೂರಿಗಳಿಂದ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಮಾಡಿ ಶವವನ್ನು ಬಿಸಾಕಿ ಹೋಗಿದ್ದರು.

ರೌಡಿ ಬಾಂಬೆ ಸಲೀಂ ಹೈದರಾಬಾದ್‌, ಮುಂಬೈ, ಸೇರಿದಂತೆ ಒಟ್ಟು 38 ಕೊಲೆ ಸುಲಿಗೆ ದರೋಡೆ ಕೊಲೆಗೆ ಪ್ರಯತ್ನ, ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಲಘಟ್ಟಪುರ ಠಾಣೆ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇರುತ್ತಾನೆ. ಸಲೀಂನನ್ನು ಬಾಗೇಪಲ್ಲಿ ಠಾಣೆ ಕಸ್ಟಡಿಗೆ ನೀಡಬೇಕು ಎಂದು ಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ. ಈ ಬಗ್ಗೆ ಮೃತ ರಾಜ್‌ ಕುಟುಂಬಸ್ಥರು ನಾಪತ್ತೆಯಾಗಿರುತ್ತಾನೆ ಎಂದು ಮಾಹಿತಿ ನೀಡಿದ್ದರು.ಡಿವೈಎಸ್‌ಪಿಕೆ.ರವಿಶಂಕರ್‌ ನೇತೃತ್ವದಲ್ಲಿ ಸಿಪಿಐ ನಯಾಜ್‌ ಬೇಗ್‌, ಪಿಎಸ್‌ಐ ಬಿ.ಕೆ.ಸುನಿಲ್‌ ಕುಮಾರ್‌, ಸಿಬ್ಬಂದಿಯಾದ ಶಿವಪ್ಪ ಎನ್‌ ಬ್ಯಾಕೋಡ, ಬಿ.ಆರ್‌.ಬಾಬು, ಅಂಬರೀಷ್‌, ಮಧುಸೂದನ್‌, ನಟರಾಜ್‌, ಮೋಹನ್‌ ಪ್ರಕರಣ ಭೇದಿಸಿದ್ದಾರೆ. ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ನೀಡುವುದಾಗಿ ಎಸ್ಪಿ ಘೋಷಣೆ ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next