Advertisement

Hubballi: ಪೊಲೀಸ್‌ ಠಾಣೆ ಮೇಲೆ ದಾಳಿ ಪ್ರಕರಣ ವಾಪಸ್‌: ದ. ಕನ್ನಡ ಜಿಲ್ಲಾ ಬಿಜೆಪಿ ಖಂಡನೆ

01:12 AM Oct 17, 2024 | Team Udayavani |

ಮಂಗಳೂರು: ಮತಾಂಧ ದುಷ್ಕರ್ಮಿಗಳು 2022ರಲ್ಲಿ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿ, ಇಬ್ಬರು ಪೊಲೀಸರಿಗೆ ಗಂಭೀರ ಗಾಯ ಮಾಡಿರುವ ಪ್ರಕರಣವನ್ನು ಕಾಂಗ್ರೆಸ್‌ ಸರಕಾರ ವಾಪಸ್‌ ಪಡೆದಿರುವ ನಿರ್ಧಾರ ಕಳವಳಕಾರಿ.

Advertisement

ಇದು ಸಮಾಜಘಾತಕ ವಿದ್ರೋಹಿ ಶಕ್ತಿಗಳಿಗೆ ಅಭಯಹಸ್ತ ನೀಡುವ ಆಘಾತಕಾರಿ ನಡೆಯಾಗಿದೆ. ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಕಾಂಗ್ರೆಸ್‌ ಎಷ್ಟೊಂದು ಕೀಳು ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ.

ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆದು ಕಾಂಗ್ರೆಸ್‌ ಪೊಲೀಸ್‌ ಇಲಾಖೆಗೆ ಯಾವ ಸಂದೇಶ ನೀಡಲು ಬಯಸುತ್ತದೆ ಎನ್ನುವುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು. ಸಿಎಂ, ಡಿಸಿಎಂ ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ರಾಷ್ಟ್ರಭಕ್ತ ಸಂಘಟನೆ ಯನ್ನು ಮತಾಂಧ, ಸಮಾಜಘಾತಕ, ರಾಷ್ಟ್ರ ವಿರೋಧಿ ಸಂಘಟನೆ ಜತೆಯಲ್ಲಿ ತುಲನೆ ಮಾಡುವುದನ್ನು ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next