Advertisement

ಭಾವೈಕ್ಯದ ಮೊಹರಂಗೆ ತೆರೆ 

03:49 PM Sep 22, 2018 | |

ಬಾಗಲಕೋಟೆ: ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಹಬ್ಬವಾಗಿರುವ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಮೊಹರಂ ಹಬ್ಬದ ಸಡಗರ ಮನೆ ಮಾಡಿದ್ದು, ವಿವಿಧೆಡೆ ಹಿಂದೂ-ಮುಸ್ಲಿಂರ ಜೊತೆ ಜೊತೆಯಾಗಿ ಅಲಾಯಿ ದೇವರನ್ನು (ಪಂಜಾ) ಪ್ರತಿಷ್ಠಾಪಿಸಿದ್ದಾರೆ. ಸಕ್ಕರೆ, ಬೆಲ್ಲ ಸಮರ್ಪಿಸಿ ಪೂಜೆ ಸಲ್ಲಿಸಿದರು. ನಗರದ ಪಂಖಾ ಮಸೀದಿ ಹತ್ತಿರ ಅಲ್ಲಾ ದೇವರು ಸಮ್ಮಿಲನವಾದವು. ಮೊಹರಂ ಹಬ್ಬದಲ್ಲಿ ಹುಲಿಗಳ ಆರ್ಭಟ ಜೋರಾಗಿತ್ತು. 

Advertisement

ಮೊಹರಂ ಹಬ್ಬದ ನಿಮಿತ್ಯ ಭಕ್ತರು ಬೇಡಿಕೆ ಪೂರೈಸಿಕೊಳ್ಳಲು ದೇವರಲ್ಲಿ ಹರಕೆ ತೀರಿಸಲು ಹುಲಿ ವೇಷವನ್ನು ತೊಟ್ಟು ದೇವರ ಮುಂದೆ ಹುಲಿ ನೃತ್ಯ ಮಾಡುತ್ತ ಹರಕೆ ತೀರಿಸಿದರು. ಜೊತೆಗೆ ಹಿಂದೂ-ಮುಸ್ಲಿಂರು ಭಾವೈಕತೆ ಸಂಕೇತವಾಗಿರುವ ಮೊಹರಂ ಹಬ್ಬದಲ್ಲಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡು ಭಕ್ತರು ಉತ್ತತ್ತಿಗಳನ್ನು ದೇವರ ಮೇಲೆ ಎಸೆದು ಪುನೀತರಾದರು. ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದೇವರುಗಳು ಶುಕ್ರವಾರ ಸಂಜೆ ನದಿಗಳಿಗೆ ತೆರಳಿ ವಿಸರ್ಜನೆಗೊಂಡ ನಂತರ ಮೊಹರಂ ಹಬ್ಬದ ಸಂಭ್ರಮಕ್ಕೆ ತೆರೆ ಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next