Advertisement
ಬಾಗಲಕೋಟೆ ನಗರವೂ ಸೇರಿದಂತೆ ಸ್ಥಳೀಯವಾಗಿ ಯಾವುದೇ ಕಾರ್ಯಕ್ರಮ ಇದ್ದರೆ ಈ ಹಳೆಯ ಕಾರನ್ನೇ ಬಳಸುತ್ತಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡುವುದಿದ್ದರೆ ಮಾತ್ರ ಹೊಸ ಇನ್ನೋವಾ ಕಾರು ಬಳಸುತ್ತಿದ್ದಾರೆ. ಜಿಪಂ ಉಪ ಕಾರ್ಯದರ್ಶಿಯಾಗಿದ್ದ ವಿ.ಎಸ್.ಹಿರೇಮಠ ಬಳಸುತ್ತಿದ್ದ 2011ರ ಮಾದರಿಯ ಅಂಬಾಸಿಡರ್ ಕಾರು ಕಳೆದ 3 ವರ್ಷಗಳಿಂದ ಶೆಡ್ ಸೇರಿತ್ತು.ಜಿಪಂಗೆ ಟಿ. ಭೂಬಾಲನ್ ಸಿಇಒ ಆಗಿ ಬಂದ ಬಳಿಕ ಶೆಡ್‌ನಲ್ಲಿ ಖಾಲಿ ನಿಂತಿದ್ದ ಕಾರು ನೋಡಿ ಇದನ್ನು ಏಕೆ ಬಳಸುತ್ತಿಲ್ಲ ಎಂದು ವಿಚಾರಿಸಿದ್ದರು.
ಜಿಲ್ಲೆಗೆ ಬಂದಿದ್ದ ಆರ್‌ಡಿಪಿಆರ್ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಕೂಡಾ ಈ ಕಾರಿನಲ್ಲಿ ಸಂಚಾರ ಮಾಡಿ ಖುಷಿ ಪಟ್ಟಿದ್ದರು. ಜತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಕೂಡ ಈ ಅಂಬಾಸಿಡರ್ ವಾಹನದಲ್ಲಿ ಸಂಚರಿಸಿ ಸಂಭ್ರಮಿಸಿದ್ದರು. ಮಾರುಕಟ್ಟೆಗೆ ಎಷ್ಟೇ ಹೊಸ ಮಾದರಿಯ ಕಾರು ಬಂದರೂ ಈ ಹಳೆಯ ಅಂಬಾಸಿಡರ್ ಕಾರಿನ ಓಡಾಟ ಅತ್ಯಂತ ಆರಾಮದಾಯಕ ಹಾಗೂ ಸುರಕ್ಷಿತ. ಅಪಘಾತ ಸಂಭವಿಸಿ ಕನಿಷ್ಟ 2ರಿಂದ 3 ಪಲ್ಟಿ ಆದರೂ ಒಳಗೆ ಇದ್ದವರಿಗೆ ಏನೂ ಆಗಲ್ಲ. ಆದರೆ, ಮೈಲೇಜ್ ವಿಷಯದಲ್ಲಿ ಸ್ವಲ್ಪ ದುಬಾರಿಯಾಗುತ್ತದೆ. ಹೀಗಾಗಿ ನಮ್ಮ ಸಾಹೇಬರು ಸ್ಥಳೀಯವಾಗಿ ಮಾತ್ರ ಇದನ್ನು ಬಳಸುತ್ತಾರೆ.
ಪ್ರಕಾಶ ಗುಳೇದಗುಡ್ಡ (ತೊನಶ್ಯಾಳ), ಬಾಗಲಕೋಟೆ ಜಿಪಂ ಸಿಇಒ ಕಾರು ಚಾಲಕ