ಡೆಹ್ರಾಡೂನ್: ಜೋಶಿಮಠದಲ್ಲಿ ಭೂಕುಸಿತದ ಆತಂಕ ಎದುರಾಗಿರುವಂತೆಯೇ, ಬದರಿನಾಥಕ್ಕೂ ಅದೇ ಮಾದರಿಯ ತೊಂದರೆ ಎದುರಾಗಲಿದೆಯೇ ಎಂಬ ಆತಂಕ ಕಾಡತೊಡಗಿದೆ. ಉತ್ತರಾಖಂಡದ ಸರ್ಕಾರ ಮತ್ತು ಬದರಿನಾಥ ದೇಗುಲ ಆಡಳಿತ ಮಂಡಳಿಯ ಪ್ರಕಾರ ಸದ್ಯಕ್ಕೆ ಏನೂ ಸಮಸ್ಯೆ ಕಾಡದೇ ಇದ್ದರೂ, ನರಸಿಂಹ ದೇಗುಲದ ಸುರಕ್ಷತೆಯ ಬಗ್ಗೆ ಯೋಚನೆ ಮಾಡಲೇಬೇಕಾಗಿದೆ. ದೇಗುಲ ಹೊಂದಿರುವ ಭಾರೀ ಪ್ರಮಾಣದ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಸುರಕ್ಷಿತವಾಗಿ ಎಲ್ಲಿ ಮತ್ತು ಹೇಗೆ ಇರಿಸುವುದು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಜೋಶಿಮಠದ ಸಿಂಗ್‌ಧಾರ್ ವಾರ್ಡ್ ಮತ್ತು ಜೆ.ಪಿ.ಕಾಲೋನಿ ಭೂಕುಸಿತದಿಂದ ಹೆಚ್ಚಿನ ಹಾನಿಯಾಗಿರುವ ಪ್ರದೇಶಗಳು. ಈ ಸ್ಥಳದಿಂದ ನರಸಿಂಗ ದೇಗುಲಕ್ಕೆ ಅರ್ಧ ಕಿಮೀ ದೂರವೇ ಇದೆ. ಚಳಿಗಾಲದ ಅವಧಿಯಲ್ಲಿ ಬದರಿನಾಥ ದೇಗುಲದ ಆಭರಣವನ್ನೆಲ್ಲ ನರಸಿಂಹ ದೇಗುಲಕ್ಕೇ ತರಲಾಗುತ್ತದೆ.
ಇದೇ ವೇಳೆ, ಬದರಿನಾಥಕ್ಕೆ ತೆರಳುವ ಏಕೈಕ ದಾರಿಯಲ್ಲಿ ಕೂಡ ಹಲವೆಡೆ ರಸ್ತೆಗಳು ಹಾಗೂ ಮೋರಿಗಳು ಬಿರುಕು ಬಿಟ್ಟಿವೆ.