Advertisement

ಬ್ಯಾಡ್ಮಿಂಟನ್‌: ಭಾರತದ ನಂದಗೋಪಾಲ್‌ಗೆ ಅವಳಿ ಪ್ರಶಸ್ತಿ

07:30 AM Sep 11, 2017 | Team Udayavani |

ಖಾರ್‌ಕೀವ್‌ (ಉಕ್ರೈನ್‌): ಭಾರತದ ಪುರುಷರ ಡಬಲ್ಸ್‌ ಮತ್ತು ಮಿಕ್ಸೆಡ್‌ ಡಬಲ್ಸ್‌ ಆಟಗಾರರು ಉಕ್ರೈನಿನ ಖಾರ್‌ಕೀವ್‌ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೂಟದಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.

Advertisement

ಪುರುಷರ ಡಬಲ್ಸ್‌ನಲ್ಲಿ ಕೆ. ನಂದಗೋಪಾಲ್‌ ಮತ್ತು ರೋಹನ್‌ ಕಪೂರ್‌ ಅವರು ಸ್ನೇಹಿತರಾದ ಫ್ರಾನ್ಸಿಸ್‌ ಅಲ್ವಿನ್‌ ಮತ್ತು ಕೋನ ತರುಣ್‌ ಅವರನ್ನು 18-21, 24-22, 21-18 ಗೇಮ್‌ಗಳಿಂದ ಉರುಳಿಸಿದರು. ಈ ಪಂದ್ಯ 55 ನಿಮಿಷಗಳವರೆಗೆ ಸಾಗಿತ್ತು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಕೆ. ನಂದಗೋಪಾಲ್‌ ತನ್ನ ಎರಡನೇ ಪ್ರಶಸ್ತಿ ಗೆದ್ದರು. ಮಹಿಮಾ ಅಗರ್ವಾಲ್‌ ಜತೆಗೂಡಿ ಆಡಿದ ಅವರು ಅಗ್ರ ಶ್ರೇಯಾಂಕದ ಸೌರಬ್‌ ಶರ್ಮ ಮತ್ತು ಅನುಷ್ಕಾ ಪರೀಖ್‌ ಅವರನ್ನು 21-14, 21-15 ಗೇಮ್‌ಗಳಿಂದ ಕೇವಲ 30 ನಿಮಿಷಗಳಲ್ಲಿ ಉರುಳಿಸಿ ಆಘಾತಗೊಳಿಸಿದರು. ಆದರೆ ವನಿತೆಯರ ಸಿಂಗಲ್ಸ್‌ನಲ್ಲಿ ಭಾರತದ ಶ್ರೀಕೃಷ್ಣ ಪ್ರಿಯಾ ಕುದರವಲ್ಲಿ ಸ್ವಲ್ಪದರಲ್ಲಿ ಪ್ರಶಸ್ತಿ ಗೆಲ್ಲಲು ವಿಫ‌ಲರಾದರು. ಮೂರನೇ ಶ್ರೇಯಾಂಕದ ಅವರು ಕಠಿನ ಹೋರಾಟ ನಡೆಸಿದರೂ ಅಂತಿಮವಾಗಿ ಸ್ಥಳೀಯ ಆಟಗಾರ್ತಿ ನಟಾಲ್ಯಾ ವಾಯ್‌ಟೆÕಕ್‌ ಅವರಿಗೆ 21-18, 16-21, 21-23 ಗೇಮ್‌ಗಳಿಂದ ಶರಣಾದರು.

Advertisement

Udayavani is now on Telegram. Click here to join our channel and stay updated with the latest news.

Next