ಹೊಸದಿಲ್ಲಿ: ಕೋವಿಡ್ 19 ವೈರಸ್ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ಯಾಡ್ಮಿಂಟನ್ ವಿಶ್ವ ಫೆಡರೇಶನ್ (ಬಿಡಬ್ಲ್ಯುಎಫ್) ಸೋಮವಾರ ಮೇ ತಿಂಗಳಿಂದ ಜುಲೈವರೆಗೆ ನಿಗದಿಪಡಿಸಿದ ಎಲ್ಲ ಅಂತಾರಾಷ್ಟ್ರೀಯ, ಜೂನಿಯರ್ ಮತ್ತು ಪ್ಯಾರಾ ಬ್ಯಾಡ್ಮಿಂಟನ್ ಕೂಟಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.
ಎಚ್‌ಎಸ್‌ಬಿಸಿ ಬಿಡಬ್ಲ್ಯುಎಫ್ ವಿಶ್ವ ಟೂರ್, ಬಿಡಬ್ಲ್ಯುಎಫ್ ಟೂರ್ ಮತ್ತು ಇತರ ಬಿಡಬ್ಲ್ಯುಎಫ್ ಅನುಮತಿ ಪಡೆದ ಕೂಟಗಳ ಸಹಿತ ಗ್ರೇಡ್ 2 ಮತ್ತು 3ರ ಕೂಟಗಳು ಇವುಗಳಲ್ಲಿ ಸೇರಿವೆ.
ಆತಿಥ್ಯ ಸದಸ್ಯ ಅಸೋಸಿಯೇಶನ್ಸ್ (ಎಚ್‌ಎಂಎ) ಮತ್ತು ಕಾಂಟಿನೆಂಟಲ್ ಕಾನೆ#ಡರೇಶನ್ಸ್ (ಸಿಸಿ)ಗಳ ಸಲಹೆ ಮತ್ತು ಒಪ್ಪಿಗೆ ಪಡೆದು ಕೂಟಗಳನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು ಎಂದು ಬಿಡಬ್ಲ್ಯುಎಫ್ ಪ್ರಕಟನೆ ತಿಳಿಸಿದೆ. ರದ್ದಾದ ಕೂಟಗಳಲ್ಲಿ 2020ರ ಇಂಡೋನೇಶ್ಯ, ಆಸ್ಟ್ರೇಲಿಯನ್ ಓಪನ್ ಕೂಡ ಸೇರಿದೆ.
ವಿಶ್ವದೆಲ್ಲೆಡೆ ಕೋವಿಡ್ 19 ಅಪಾಯಕಾರಿಯಾಗಿ ಹರಡುತ್ತಿರುವ ಕಾರಣ ಈ ಕೂಟಗಳನ್ನು ರದ್ದು ಮಾಡಲಾಗಿದೆ. ಆಟಗಾರರ ಸಹಿತ ಅಧಿಕಾರಿಗಳ ಮತ್ತು ಬ್ಯಾಡ್ಮಿಂಟನ್ ಸಮುದಾಯದ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಪ್ರಥಮ ಆದ್ಯತೆ ನೀಡುತ್ತೇವೆ. ಈ ಕಾರಣಗಳಿಗಾಗಿ ಜುಲೈವರೆಗಿನ ಕೂಟಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಬಿಡಬ್ಲ್ಯುಎಫ್ ಕಳೆದ ವಾರ ವಿಶ್ವ ರ್‍ಯಾಂಕಿಂಗ್ ಮತ್ತು ವಿಶ್ವ ಜೂನಿಯರ್ ರ್‍ಯಾಂಕಿಂಗನ್ನು ಮುಂದಿನ ಸೂಚನೆ ಬರುವವರೆಗೆ ತಡೆ ಹಿಡಿಯಲು ನಿರ್ಧರಿಸಿತ್ತು ಮತ್ತು ಮುಂದಿನ ಎಲ್ಲ ಕೂಟಗಳಿಗೆ ಮಾ. 17ರಂದು ಇರುವ ರ್‍ಯಾಂಕಿಂಗನ್ನು ಪರಿ ಗಣಿಸಲಾಗುತ್ತದೆ ಎಂದು ಪ್ರಕಟಿಸಿತ್ತು.
ರದ್ದುಗೊಂಡ
ಗ್ರೇಡ್ 2 ಕೂಟಗಳು
ಈ ವರ್ಷದ ಆಸ್ಟ್ರೇಲಿಯನ್ ಓಪನ್ (ಜೂ. 2-7), ಥಾçಲಂಡ್ ಓಪನ್ (ಜೂ. 9-14), ಇಂಡೋನೇಶ್ಯ ಓಪನ್ (ಜೂ. 16-21) ಮತ್ತು ರಶ್ಯನ್ ಓಪನ್ (ಜು. 7-12) ಬ್ಯಾಡ್ಮಿಂಟನ್ ಕೂಟಗಳು ರದ್ದುಗೊಂಡಿವೆ.