ಮನಿಲಾ: ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಜಪಾನಿಯ ಅಕಾನೆ ಯಮಾಗುಚಿ ಅವರ ಕೈಯಲ್ಲಿ ಸೋಲನ್ನು ಕಂಡಿರುವ ಭಾರತದ ಪಿ.ವಿ. ಸಿಂಧು ಅವರು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದರು.
Advertisement
ಮೊದಲ ಗೇಮ್ ಗೆಲ್ಲುವ ಮೂಲಕ ಉತ್ತಮ ಆರಂಭ ಪಡೆದಿದ್ದ 26ರ ಹರೆಯದ ಸಿಂಧು ಅಂತಿಮವಾಗಿ ಅಗ್ರ ಶ್ರೇಯಾಂಕದ ಮತ್ತು ವಿಶ್ವದ ಎರಡನೇ ರ್‍ಯಾಂಕಿನ ಯಮಾಗುಚಿ ಅವರಿಗೆ 21-13, 19-21, 16-21 ಗೇಮ್‌ಗಳಿಂದ ಸೋತರು. ಈ ಪಂದ್ಯ ಒಂದು ತಾಸು ಮತ್ತು ಆರು ನಿಮಿಷಗಳವರೆಗೆ ಸಾಗಿತ್ತು. ಈ ಕೂಟದಲ್ಲಿ ಇದು ಸಿಂಧು ಪಡೆದ ಎರಡನೇ ಪದಕವಾಗಿದೆ. 2014ರ ಜಿಮ್‌ಚಿಯೋನ್ ಕೂಟದಲ್ಲಿ ಅವರು ಕಂಚು ಜಯಿಸಿದ್ದರು.