Advertisement

All England Open Badminton : ಸಿಂಧು ಪರಾಭವ, ಹೊರಕ್ಕೆ

09:22 PM Mar 14, 2024 | Team Udayavani |

ಬರ್ಮಿಂಗ್‌ಹ್ಯಾಮ್‌: ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲಿ ಪಿ.ವಿ. ಸಿಂಧು ಪರಾಭವಗೊಂಡಿದ್ದಾರೆ.

Advertisement

ಕೊರಿಯಾದ ಆ್ಯನ್‌ ಸೆ ಯಂಗ್‌ ವಿರುದ್ಧದ ಪಂದ್ಯವನ್ನು ಸಿಂಧು 19-21, 11-21 ನೇರ ಗೇಮ್‌ಗಳಲ್ಲಿ ಕಳೆದುಕೊಂಡರು. 42 ನಿಮಿಷಗಳಲ್ಲಿ ಭಾರತೀಯಳ ಆಟ ಕೊನೆಗೊಂಡಿತು. ವಿಶ್ವದ ನಂ.1 ಆಟಗಾರ್ತಿ ಆ್ಯನ್‌ ಸೆ ಯಂಗ್‌ ವಿರುದ್ಧ ಪಿ.ವಿ. ಸಿಂಧು ಅನುಭವಿಸಿದ ಸತತ 7ನೇ ಸೋಲು ಇದಾಗಿದೆ. ಕಳೆದ ವರ್ಷ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಯಂಗ್‌, ಈ ಸೀಸನ್‌ನಲ್ಲಿ ಮಲೇಷ್ಯಾ ಮತ್ತು ಫ್ರಾನ್ಸ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next