Advertisement
ಮಂಜೇಶ್ವರ ಎಸ್.ಎ.ಟಿ. ಶಾಲೆಯಲ್ಲಿ ಈ ಪ್ರದರ್ಶನ ಆರಂಭಗೊಂಡಿದ್ದು, ಕೇರಳ ವಿಧಾನಸಭೆ ಪ್ರಾಚ್ಯವಸ್ತು ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಸಾಕ್ಷರತಾ ಮಿಷನ್ ಪ್ರಾಧಿಕಾರದ ಸಹಕಾರದೊಂದಿಗೆ ಜರಗುತ್ತಿದೆ.
Related Articles
Advertisement
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಪ್ರದರ್ಶನವನ್ನು ಉದ್ಘಾಟಿಸಿದರು. ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ವಿಧಾನಸಭೆ ವಿಭಾಗ ಅಧಿಕಾರಿ ಎ.ವಿಜಯನ್ ಅಮೃತರಾಜ್ ಶುಭಾಶಂಸನೆಗೈದರು.
ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಹರೈನ್ ಮಹಮ್ಮದ್, ಮಹಮ್ಮದ್ ಮುಸ್ತಫ, ಮಂಜೇಶ್ವರ ಗ್ರಾಮ ಪಂಚಾಯತ್ ಮುಕ್ತಾರ್, ಕೆ.ಎಂ.ಕೆ.ಅಬ್ದುಲ್ ರಹಮಾನ್ ಹಾಜಿ, ಸದಸ್ಯೆ ಸುಪ್ರಿಯ ಶೆಣೆ„, ಜಿಲ್ಲಾ ಸಾಕ್ಷರತಾ ಮಿಷನ್ ಯೋಜನೆ ಸಂಚಾಲಕ ಶಾಜು ಜೋನ್, ಸಹಾಯಕ ಸಂಚಾಲಕ ಶಾಸ್ತಾ ಪ್ರಸಾದ್, ಗೀತಾ ಟೀಚರ್, ನೋಡೆಲ್ ಪ್ರೇರಕ್ ಗ್ರೇಸಿ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.
ಬೆಳಕು ಚೆಲ್ಲುವ ಪ್ರಯತ್ನಕೇರಳದಲ್ಲಿ ಪ್ರಜಾಪ್ರಭುತ್ವ ನೀತಿ ಅರಳುವ ಮುನ್ನ ಇದ್ದ ಆಡಳಿದ ಸ್ವರೂಪವನ್ನು ಸ್ಪಷ್ಟವಾಗಿ ಈ ಪ್ರದರ್ಶನ ಚಿತ್ರಿಸುತ್ತದೆ. ಸಮಾನತೆಯ ಮೂಲಮಂತ್ರದೊಂದಿಗೆ ಮಾನವಬದುಕಿಗೆ ಬೇಕಾದ ತಳಹದಿಗೆ ನಡೆಸಲಾದ ನಿನ್ನೆಗಳ ಹೋರಾಟಗಳ ಹಂತಗಳಿಗೆ ಬೆಳಕು ಚೆಲ್ಲುವ ಯತ್ನ ಈ ಪ್ರದರ್ಶನ ನಡೆಸುತ್ತದೆ. ತಿರುವಾಂಕೂರು ಆಡಳಿತದಿಂದ ತೊಡಗಿ ಇಂದಿನ ಜನರ ಕೈಗೆ ಅಧಿಕಾರ ಲಭಿಸಿರುವ (ಪ್ರಜಾಪ್ರಭುತ್ವ ರೀತಿಯ) ಸಚಿವ ಸಂಪುಟ ರಚನೆ ವರೆಗಿನ ಕ್ರಾಂತಿಕಾರಿ ಬೆಳವಣಿಗೆಗಳನ್ನು ತಿಳಿಸುತ್ತದೆ. ಗಣತಂತ್ರ ಕೇರಳದ ಪರಂಪರೆಯ ಹೆಜ್ಜೆಗಳನ್ನು ಸಂರಕ್ಷಿಸುವ ದಾಖಲೆಗಳು ಇಲ್ಲಿವೆ. ಛಾಯಾಚಿತ್ರಗಳ, ವೀಡಿಯೋ ಸಹಿತ ಪ್ರದರ್ಶನ ಇಲ್ಲಿ ನಡೆಯುತ್ತಿದೆ.