Advertisement

ಡಿಸೆಂಬರ್‍ ಗೆ ಬರ್ತಿದ್ದಾನೆ “ಬಡವ ರಾಸ್ಕಲ್”

01:51 PM Oct 07, 2021 | Team Udayavani |

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ “ಬಡವ ರಾಸ್ಕಲ್” ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಣೆಯಾಗಿದೆ. ಈ ವರ್ಷದ ಡಿಸೆಂಬರ್ 24ರ ಕ್ರಿಸ್ಮಸ್ ಹಬ್ಬದಂದು ಈ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ.

Advertisement

ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ‘ಉಡುಪಿ ಹೋಟೆಲು’ ಹಾಡು ಈಗಾಗಲೇ ಸಿನಿ ಪ್ರೇಮಿಗಳ ಮನಗೆದ್ದಿದೆ. ‘ಬಡವ ರಾಸ್ಕಲ್’ ಚಿತ್ರವನ್ನು ಶಂಕರ್ ಗುರು ನಿರ್ದೇಶನ ಮಾಡಿದ್ದು, ‘ಡಾಲಿ ಪಿಕ್ಚರ್ಸ್’ ಬ್ಯಾನರ್​ನಲ್ಲಿ ಚಿತ್ರ ತಯಾರಾಗುತ್ತಿದೆ. ಪ್ರೀತಾ ಜಯರಾಮನ್ ಬಡವ ರಾಸ್ಕಲ್ ಚಿತ್ರಕ್ಕೆ ಕ್ಯಾಮೆರಾದ ಜವಾಬ್ದಾರಿ ಹೊತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ನಾಗಭೂಷಣ್, ರಂಗಾಯಣ ರಘು, ಪೂರ್ಣಚಂದ್ರ ಮೈಸೂರು ಮೊದಲಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಧನಂಜಯ್ ಅವರು ಸ್ಯಾಂಡಲ್ವುಡ್ ಮೋಸ್ಟ್ ಬ್ಯುಝಿ ನಟ. ಇವರು ನಟಿಸಿರುವ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಇವರು ನಟಿಸಿರುವ ‘ರತ್ನನ್ ಪ್ರಪಂಚ’ ಚಿತ್ರವು ಅಕ್ಟೋಬರ್ 22ರಂದು ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುತ್ತಿದೆ. ಲಾಗಿತ್ತು. ಇದೀಗ ‘ಬಡವ ರಾಸ್ಕಲ್’ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದ ಖ್ಯಾತ ನಟರೊಂದಿಗೆ ಧನಂಜಯ್ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ಪುಷ್ಪ ದಿ ರೈಸ್’ ಚಿತ್ರವು ಡಿಸೆಂಬರ್ 17ರಂದು ಎಲ್ಲೆಡೆ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next