ಬಾದಾಮಿ: 1 ಕಪ್
ಸಕ್ಕರೆ: ಅರ್ಧ ಕಪ್
ನೀರು : ಆರು ಕಪ್
ತುಪ್ಪ: ಅರ್ಧ ಕಪ್
ಕೇಸರಿ ಎಳೆ : ಎಂಟು
Advertisement
ಮಾಡುವ ವಿಧಾನ: ಒಂದು ಪಾತ್ರೆಗೆ ನಾಲ್ಕು ಕಪ್ ನೀರನ್ನು ಸೇರಿಸಿ ಬಿಸಿ ಮಾಡಬೇಕು. ನೀರು ಚೆನ್ನಾಗಿ ಕುದಿದ ಬಳಿಕ ಬಾದಾಮಿಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. ದೊಡ್ಡ ಉರಿಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ ಬೆಂದ ಬಳಿಕ ಸಿಪ್ಪೆ ತೆಗೆದು ಬಾದಾಮಿಯನ್ನು ಮಿಕ್ಸಿಯಲ್ಲಿ ಹಾಕಿ ಕಾಲು ಕಪ್ ನೀರನ್ನು ಸೇರಿಸಿ, ಮೃದುವಾಗಿ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಕಾಲು ಕಪ್ ನೀರನ್ನು ಬಿಸಿಮಾಡಿ. ಅದಕ್ಕೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ತಿರುವಿ ಮತ್ತು ಪಾಕ ಬರಲು ಬಿಡಿ. ಕೇಸರಿ ಎಳೆಯನ್ನು ಸೇರಿಸಿ. ಕೆಲವು ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ. ಅನಂತರ ಸಣ್ಣ ಉರಿಯಲ್ಲಿ ಇಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ. ಒಮ್ಮೆ ಕರಗಿದ ಮೇಲೆ, ರುಬ್ಬಿಕೊಂಡ ಬಾದಾಮಿ ಪೇಸ್ಟ್‌ಅನ್ನು ಸೇರಿಸಿ. ಮಿಶ್ರಣವು ತುಪ್ಪದೊಂದಿಗೆ ಬೆರೆಸಿ ಹರಳಿನ ಸ್ಥಿರತೆ ಬರುವ ತನಕ 8-10 ನಿಮಿಷಗಳ ಕಾಲ ನಿರಂತರವಾಗಿ ತಿರುವುತ್ತಲೇ ಇರಿ. ಒಮ್ಮೆ ಸ್ಥಿರತೆಗೆ ಬಂದ ಮೇಲೆ ಸಕ್ಕರೆ ಪಾಕವನ್ನು ಸೇರಿಸಿ. ತುಪ್ಪವು ಬೇರ್ಪಡುವವರೆಗೆ ಚೆನ್ನಾಗಿ ಮಿಶ್ರಗೊಳಿಸಿ. ಉರಿಯನ್ನು ಆರಿಸಿ. ಹಲ್ವಸವಿಯಲು ಸಿದ್ಧ.