Advertisement

ಬ್ಯಾಡಗಿ: ಆರೋಗ್ಯವಂತ ತಾಯಿ-ಮಕ್ಕಳು ದೇಶದ ಆಸ್ತಿ: ಶಿವಣ್ಣನವರ

03:59 PM Oct 01, 2024 | Team Udayavani |

ಉದಯವಾಣಿ ಸಮಾಚಾರ
ಬ್ಯಾಡಗಿ: ದೇಶದಲ್ಲಿ ಶೇ. 14.2 ರಷ್ಟು ಕುಟುಂಬಗಳು ಬಡತನದಲ್ಲಿವೆ. ಹೀಗಾಗಿ ತಾಯಿ ಮತ್ತು ಆರೋಗ್ಯವಂತ ಮಕ್ಕಳು ದೇಶದ
ಬಹುದೊಡ್ಡ ಆಸ್ತಿಯಾಗಿದ್ದು, ಇವರಿಬ್ಬರು ದೇಶದ ಆಧಾರ ಸ್ತಂಭಗಳಾಗಿದ್ದಾರೆ. ಹೀಗಾಗಿ ಅವರೆಲ್ಲರ ಆರೋಗ್ಯದ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಪೋಷಣ್‌ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರೋಗ್ಯ, ಕ್ಷೇಮ ಮತ್ತು ರೋಗ ನಿರೋಧಕ ಶಕ್ತಿ ಬೆಳೆಸುವ ಹಾಗೂ ಅಭಿವೃದ್ಧಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯವಸ್ಥೆ ರಚಿಸಿವೆ. ತಾಯಿ ಮತ್ತು ಮಗು ಅಪೌಷ್ಟಿಕತೆ ಸವಾಲುಗಳನ್ನು ಎದುರಿಸಲು ಪೋಷಣ್‌ ಅಭಿಯಾನ ಮೂಲಕ ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ನಡೆಸಿವೆ ಎಂದರು.

ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್‌.ಆರ್‌. ಪಾಟೀಲ ಮಾತನಾಡಿ, ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಬದಲಾವಣೆಯಿಂದ ರೋಗಗಳಿಗೆ ಬರುತ್ತಿವೆ. ಪ್ರಾಚೀನ ಕಾಲದ ಸಮತೋಲಿತ ಆಹಾರ ಪದ್ಧತಿ ರೋಗ ಹತ್ತಿರ ಬರದಂತೆ ತಡೆಯುತ್ತಿತ್ತು, ಆದರೆ ಇಂದಿನ ರಾಸಾಯನಿಕಯುಕ್ತ ಆಹಾರ ಪದಾರ್ಥಗಳು ಎಲ್ಲರನ್ನೂ ರೋಗಗ್ರಸ್ಥರನ್ನಾಗಿಸುತ್ತಿವೆ. ಇದರಿಂದ ಜನಿಸುವ ಮಕ್ಕಳು ಸಹ ಅಪೌಷ್ಟಿಕೆಯಿಂದ ಬಳಲುವಂತಾಗಿದ್ದು, ಗರ್ಭಾವಸ್ಥೆ ಹಾಗೂ ನಂತರ ಉತ್ತಮ ಆಹಾರ ಪದ್ಧತಿ ಅತ್ಯಂತ ಪ್ರಮುಖವಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿದರು. ಇದಕ್ಕೂ ಮುನ್ನ ಸೀಮಂತ ಕಾರ್ಯಕ್ರಮ ನೆರವೇರಿತು. ಇದೇ
ಸಂದರ್ಭದಲ್ಲಿ ಸುಮಾರು 10ಕ್ಕೂ ಹೆಚ್ಚು ಮಕ್ಕಳಿಗೆ ಮೊದಲು ತುತ್ತು ಅನ್ನ ಉಣ ಬಡಿಸಲಾಯಿತು.

ಬಳಿಕ ಯೋಜನೆಯಡಿ ಬರುವ ಅಂಗನವಾಡಿ ಮಕ್ಕಳ ಜನ್ಮದಿನ ಆಚರಿಸಲಾಯಿತು. ಪುರಸಭೆ ಉಪಾಧ್ಯಕ್ಷ ಸುಭಾಸ್‌ ಮಾಳಗಿ,
ಸದಸ್ಯರಾದ ಬಸವರಾಜ ಛತ್ರದ, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ, ಫಕ್ಕೀರಮ್ಮ ಛಲವಾದಿ, ಶಂಕರ ಕುಸಗೂರ, ರಫೀಕ್‌ ಮುದ್ಗಲ್‌, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್‌ ಎರೇಶಿಮಿ, ಸದಸ್ಯ ದುಗೇìಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಶಂಭನಗೌಡ ಪಾಟೀಲ, ಮುಖಂಡರಾದ ದಾನಪ್ಪ ಚೂರಿ, ಸೋಮಣ್ಣ ಸಂಕಣ್ಣನವರ, ಖಾದರಸಾಬ್‌ ದೊಡ್ಮನಿ, ಶಿಶು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ತಹಶೀಲ್ದಾರ್‌ ಎಫ್‌.ಎ. ಸೋಮನಕಟ್ಟಿ, ಟಿಒ ಕೆ.ಎಂ. ಮಲ್ಲಿಕಾರ್ಜುನ, ಅಕ್ಷರ ದಾಸೋಹಾ ಧಿಕಾರಿ ಎನ್‌. ತಿಮ್ಮಾರೆಡ್ಡಿ, ಸಿಡಿಪಿಒ ಬಸವರಾಜ ಪೂಜಾರ ಸೇರಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next