ಹಾವೇರಿ: ಬ್ಯಾಡಗಿ ತಾಲೂಕುಗಳ ಗ್ರಾಪಂಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆದೇಶ ಹೊರಡಿಸಿದ್ದಾರೆ.
ಚುನಾಯಿತ ಗ್ರಾಪಂ ಸದಸ್ಯರ ಅಧಿಕಾರ ಅವಧಿ ಜೂ. 25ರಿಂದ ಜು. 5ರೊಳಗೆ ಕೊನೆಗೊಳ್ಳಲಿದೆ. ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಕಾಲವಕಾಶ ಅಗತ್ಯವಾಗಿರುವುದರಿಂದ ಅಗತ್ಯ ಕೆಲಸ ನಿರ್ವಹಣೆಗಾಗಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಬ್ಯಾಡಗಿ ತಾಲೂಕಿನ ಸೂಡಂಬಿ, ಚಿಕ್ಕಬಾಸೂರ ಗ್ರಾಪಂಗೆ ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ (9740090877), ಘಾಳಪೂಜಿ, ಹಿರೇಅಣಜಿ ಗ್ರಾ.ಪಂ.ಗಳಿಗೆ ಬಿಇಒ ರುದ್ರಮುನಿ ಬಿ.ಕೆ. (9480695246), ಕುಮ್ಮೂರ ಹಾಗೂ ಹಿರೇಹಳ್ಳಿ ಗ್ರಾಪಂಗಳಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಮರಗಣ್ಣನವರ (8277931826), ಹೆಡಿಗ್ಗೊಂಡ ಹಾಗೂ ಶಿಡೇನೂರ ಗ್ರಾಪಂಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಕುರುಬರ (9686539694), ಬಿಸಲಹಳ್ಳಿ ಹಾಗೂ ಬನ್ನಿಹಟ್ಟಿ ಗ್ರಾಪಂಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಿಮ್ಮಾರೆಡ್ಡಿ(8073925160), ಕದರಮಂಡಲಗಿ ಹಾಗೂ ಮಾಸಣಗಿ ಗ್ರಾಪಂಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪುಂಡಲೀಕ ಮಾನವರ (9008349150), ಮಲ್ಲೂರ ಗ್ರಾ.ಪಂ.ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ.ಎಸ್.ಪಾಟೀಲ (9448555923), ಮೊಟೇಬೆನ್ನೂರ ಗ್ರಾ.ಪಂ.ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಲಿಂಗಪ್ಪ (9980727325), ಗುಂಡೇನಹಳ್ಳಿ ಹಾಗೂ ಕಲ್ಲೇದೇವರ ಗ್ರಾಪಂಗೆ ಜಿ.ಪಂ ಇಂಜನೀಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ಆರ್. ಕಲ್ಲೋಳಿಕರ (9741747371), ಬುಡಪನಹಳ್ಳಿ ಹಾಗೂ ಮತ್ತೂರ ಗ್ರಾಪಂಗೆ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ (9448961500) ಅವರನ್ನು ನೇಮಕ ಮಾಡಲಾಗಿದೆ.