Advertisement
ಕೈಕಂಬ: ಒಂದೇ ಸೂರಿನಡಿ ಎಲ್ಲ ಸೌಲಭ್ಯ ಸಿಗುವ ಪಂಚಾಯತ್ ಕಟ್ಟಡ ಒದಗಿಸುವಂತೆ ಬಡಗ ಎಡಪದವು ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಅದು ಇನ್ನೂ ಈಡೇರಿಲ್ಲ.
Related Articles
Advertisement
ಮನೆ ನಿವೇಶನಕ್ಕೆ ನೂರಕ್ಕಿಂತ ಹೆಚ್ಚು ಅರ್ಜಿಗಳು ಬಂದಿದ್ದು, ದಡ್ಡಿ ಮತ್ತು ಮಜ್ಜಿಗುರಿ ಬಳಿ ನಿವೇಶನಕ್ಕೆ ಸ್ಥಳವನ್ನು ಕಾದಿರಿಸಲಾಗಿದೆ. ಮಜ್ಜಿಗುರಿಯು ನಿವೇಶನಕ್ಕೆ ಯೋಗ್ಯವಲ್ಲದ ಜಾಗವಾಗಿದ್ದು, ಬೇರೆ ಸ್ಥಳವನ್ನು ಗುರುತಿಸಬೇಕಿದೆ.
ಇತರ ಸಮಸ್ಯೆಗಳೇನು?– ಕೊಳವೆ ಬಾವಿಗಳೇ ಇಲ್ಲಿನ ನೀರಿನ ಮೂಲವಾಗಿವೆೆ. ಅಂತರ್ಜಲ ಕುಸಿತದಿಂದಾಗಿ 500 ಅಡಿಗಳಿಂತ ಹೆಚ್ಚು ಆಳಕ್ಕೆ ಹೋಗಿದೆ. ಬಹುಗ್ರಾಮ ಕುಡಿ ಯುವ ನೀರಿನ ಯೋಜನೆ ಇಲ್ಲಿ ಅಗತ್ಯವಾಗಿ ಬೇಕಾಗಿದೆ. ರಸ್ತೆಗಳಿಲ್ಲದ ಮನೆಗಳಿಗೆ ನೀರಿನ ಸಂಪರ್ಕ ನೀಡುವುದೇ ಇಲ್ಲಿ ಸವಾಲಾಗಿದೆ.
– ರಾ.ಹೆ. 169 ಹಾದು ಹೋಗುತ್ತಿರುವ ಕಾರಣ ಶಾಲಾ ಸಮಯದಲ್ಲಿ ವೇಗದೂತ ಬಸ್‌ಗಳಿಗೆ ಇಲ್ಲಿ ನಿಲುಗಡೆ ನೀಡಬೇಕಿದೆ. ಸರಕಾರಿ ಬಸ್ ಸೇವೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
– ಗ್ರಾಮದ ಒಳರಸ್ತೆಗಳಾದ ಬೆಳ್ಳೆಚ್ಚಾರು-ಉರ್ಕಿ -ಪೂಪಾಡಿಕಲ್ಲು-ಎಡಪದವು ರಸ್ತೆಯಲ್ಲಿ ಬಸ್ ಸಂಚಾರವಿಲ್ಲದೇ ಗ್ರಾಮಸ್ಥರು ರಿಕ್ಷಾದಲ್ಲಿ ಪ್ರಯಾಣಿಸಬೇಕಾಗಿದೆ. ಬಸ್ ಸೌಲಭ್ಯ ಒದಗಿಸಬೇಕಿದೆ.
– ದಡ್ಡಿ-ಧೂಮಚಡವು-ಬೆಳ್ಳೆಚ್ಚಾರು-ಉರ್ಕಿ-ಪೂಪಾಡಿಕಲ್ಲು-ಎಡಪದವು ರಸ್ತೆ ವಿಸ್ತರಣೆಯಾಗಬೇಕಿದೆ.
– ಗೋಸ್ಟೈಲ್ -ಶಾಸ್ತಾವು-ತಿಪ್ಲಬೆಟ್ಟು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಬೇಕು.
– ಅಂತರ್ಜಲ ವೃದ್ಧಿಗೆ ಇಲ್ಲಿನ ಸರಕಾರಿ ಕೆರೆಗಳ ಹೂಳೆತ್ತುವ ಕಾರ್ಯವಾಗಬೇಕಿದೆ.
– ಉಪ ಆರೋಗ್ಯ ಕೇಂದ್ರಕ್ಕೆ ಖಾಯಂ ಆರೋಗ್ಯ ಸಹಾಯಕರನ್ನು ನೇಮಿಸಬೇಕು.
– 5 ಅಂಗನವಾಡಿ ಕೇಂದ್ರಗಳಿಗೆ ಅವರಣಗೋಡೆ, ಇಂಟರ್‌ಲಾಕ್ ಹಾಕಬೇಕು.
– ಶಾಂತಿಪಡ್ಪು, ಕರೆಂಕಿ, ತಿಪ್ಲಬೆಟ್ಟು , ಮಂಜನಕಟ್ಟೆ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿದ್ದು ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ.
– ಗ್ರಾಮದಲ್ಲಿ ಹಳೆ ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿಗಳ ಬದಲಾವಣೆ ಮಾಡಬೇಕು.
– ಶತಮಾನೋತ್ಸವ ಆಚರಿಸಿದ ಬಡಗ ಎಡಪದವು ಬೆಳ್ಳೆಚ್ಚಾರು ಸರಕಾರಿ ಹಿ.ಪ್ರಾ. ಶಾಲೆಯ ಮೂಲಸೌಕರ್ಯ ಒದಗಿಸಬೇಕಿದೆ. -ಸುಬ್ರಾಯ ನಾಯಕ್, ಎಕ್ಕಾರು