Advertisement
ಆಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿದೆ ದಿನಕ್ಕೆ ಸಾವಿರಾರು ಮಂದಿ ಪ್ರಯಾಣ ಮಾಡುವಂತಹ ನಿಲ್ದಾಣವಾಗಿದ್ದು ಆಲೂರು ಬಸ್ ನಿಲ್ದಾಣದ ಶೌಚಾಲಯದ ಮಲ -ಮೂತ್ರ ಪಿಟ್ ಗುಂಡಿಯು ತುಂಬಿ ಮುಚ್ಚಳ ತೆರೆದು ಗಬ್ಬೆದ್ದು ದುರ್ವಾಸನೆ ಬರುತ್ತಿದ್ದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಈ ಬಗ್ಗೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಬಿ.ಧರ್ಮರಾಜ್ ಮಾತನಾಡಿ ಎಲ್ಲಿಯೂ ಬೇಡವಾದ ತಿರಸ್ಕತ ಅಧಿಕಾರಿಗಳು ಆಲೂರು ತಾಲ್ಲೂಕಿನಲ್ಲಿ ಬೀಡು ಬಿಟ್ಟಿದ್ದಾರೆ ಭ್ರಷ್ಟಾ ಅಧಿಕಾರಿಗಳಿಗೆ ಆಶ್ರಯ ತಾಣ ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಜನಪ್ರತಿನದಿಗಳು ಕೇವಲ ಸರ್ಕಾರದಿಂದ ಹಣ ಬಿಡುಗಡೆಯಾದರೆ ಸಾಕು ಹಣ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದಾರೆ ಆಲೂರು ತಾಲ್ಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಇಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ಹಣ ಮಾಡುವ ಸಲುವಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಹಣ ಲೂಟಿ ಹೊಡಯುತ್ತಿದ್ದಾರೆ ಒಮಿಕ್ರೋನ್ ಸೊಂಕು ಹರಡುತ್ತಿದ್ದರು ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಕಣ್ಮುಚ್ಛಿ ಕುಳಿತಿದ್ದಾರೆ ತಾಲ್ಲೂಕು ಕಛೇರಿಯಲ್ಲಿಯೂ ಇದೆ ಪರಿಸ್ಥಿತಿ ತಕ್ಷಣ ಇಂತಹ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದರು.
ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ತೊಟ್ಟಿಗಳು ತುಂಬಿ ಚರಂಡಿಯಲ್ಲಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ನಿಲ್ದಾಣದ ಪಕ್ಕದಲ್ಲಿರುವ ಮನೆಯಲ್ಲಿ ವಾಸಿಸುವ ಸ್ಥಳಿಯರು ನರಕಯಾತನೆ ಅನುಭವಿಸುತ್ತಿದ್ದಾರೆ ಅದ್ದರಿಂದ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
– ಮಧು, ತಾಲ್ಲೂಕು ಉಸ್ತುವಾರಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಆಲೂರು,
ಒಟ್ಟಾರೆ, ಕೋವಿಡ್ ವೇಳೆಯೇ ತಾಲ್ಲೂಕು ಕಛೇರಿ ಸ್ವಚ್ಚತೆ ಕಾಪಾಡದೇ ಇದರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನಾದ್ರೂ ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಇತ್ತ ಗಮನಹರಿಸಿ ಸ್ವಚ್ಚತೆ ಮಾಡ್ತಾರಾ ಕಾದುನೋಡಬೇಕಿದೆ.
– ಟಿ.ಕೆ.ಕುಮಾರಸ್ವಾಮಿ, ಟಿ.ತಿಮ್ಮನಹಳ್ಳಿ