Advertisement

ಪ್ಯಾರಿಸ್‌ ಒಪ್ಪಂದದಿಂದ ಹಿಂದಕ್ಕೆ: ಅಮೆರಿಕ ಮಾಹಿತಿ

06:55 AM Aug 06, 2017 | |

ವಾಷಿಂಗ್ಟನ್‌: “ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ತನ್ನ ಉದ್ದೇಶಕ್ಕೆ ಕಟಿಬದ್ಧವಾಗಿದ್ದೇವೆ’ ಎಂದು ಪುನರುಚ್ಚರಿಸಿರುವ ಅಮೆರಿಕ, ಐತಿಹಾಸಿಕ ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಹಿಂದಕ್ಕೆ ಸರಿಯುವುದಾಗಿ ವಿಶ್ವಸಂಸ್ಥೆಗೆ ತಿಳಿಸಿದೆ. ಈ ಮೂಲಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನುಡಿದಂತೆ ನಡೆದುಕೊಳ್ಳುವ ಮೂಲಕ ತಮ್ಮ ಆಡಳಿತ ಹೇಳಿದ್ದನ್ನೇ ಮಾಡುತ್ತದೆನ್ನುವ ಸಂದೇಶವನ್ನು ಮತ್ತೂಮ್ಮೆ ರವಾನಿಸಿದ್ದಾರೆ.

Advertisement

ಅಧಿಕಾರಕ್ಕೆ ಬಂದು ತಿಂಗಳ ಬಳಿಕ ಹವಾಮಾನಕ್ಕೆ ಸಂಬಂ ಧಿಸಿ ತಮ್ಮ ನಿಲುವು ಪ್ರಕಟಿಸಿದ್ದ ಟ್ರಂಪ್‌, ಸ್ವಹಿತಾಸಕ್ತಿಯ ಕಾರಣಕ್ಕಾಗಿಯೇ 2015ರ ಪ್ಯಾರಿಸ್‌ ಒಪ್ಪಂದದಿಂದ ಹಿಂದಕ್ಕೆ ಸರಿಯುವುದಾಗಿ ಪ್ರಕಟಿಸಿದ್ದರು. ಟ್ರಂಪ್‌ರ ಈ ನಿರ್ಧಾರ ವಿಶ್ವದ ಬಹುತೇಕ ರಾಷ್ಟ್ರಗಳನ್ನು ನಿಬ್ಬೆರಗಾಗಿಸಿತ್ತು. ಅಷ್ಟೇ ಅಲ್ಲ, ಭಾರತ ಸಹಿತ ಇನ್ನೂ ಕೆಲವು ರಾಷ್ಟ್ರಗಳು ಇದನ್ನು ಖಂಡತುಂಡವಾಗಿ ಟೀಕಿಸಿದ್ದವು. ಮೂಲಗಳ ಪ್ರಕಾರ ಅಮೆರಿಕ ಹಿಂದೆ ಸರಿಯುವುದಾಗಿ ಹೇಳಿಕೊಂಡರೂ ನಿಯಮಾವಳಿಗಳ ಪ್ರಕಾರ 2020, ನ.4ರ ಮಧ್ಯಾಂತರದಲ್ಲಿ ಸಂಪೂರ್ಣ ಹಿಂದೆ ಸರಿಯಲು ಸಾಧ್ಯವಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next