ಟಗರು’ ಚಿತ್ರದಡಾಲಿ ಪಾತ್ರ ಹಿಟ್ ಆದ ನಂತರ ನಟ ಧನಂಜಯ್ ಸಿಕ್ಕಾಪಟ್ಟೆ ಬಿಝಿ ಹಾಗೂ ಬೇಡಿಕೆಯ ನಟ ಆಗಿರೋದು ನಿಮಗೆ ಗೊತ್ತೇ ಇದೆ. ಕನ್ನಡದದ ಜೊತೆಗೆ ಪರಭಾಷೆಯಲ್ಲೂ ಧನಂಜಯ್ ನಟಿಸುತ್ತಿದ್ದಾರೆ. ಈಗ ಅವರ ಎರಡುಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿವೆ. ಅಲ್ಲು ಅರ್ಜುನ್ ನಟನೆಯ “ಪುಷ್ಪ’ ಚಿತ್ರದಲ್ಲಿ ಧನಂಜಯ್ ನೆಗೆಟಿವ್ ರೋಲ್‌ಮಾಡಿದ್ದಾರೆ. ಆ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.
ಇನ್ನು, ಧನಂಜಯ್ ಹೀರೋ ಆಗಿ ನಟಿಸಿ, ತಾವೇ ನಿರ್ಮಿಸಿರುವ “ಬಡವ ರಾಸ್ಕಲ್’ಚಿತ್ರಮುಂದಿನ ವಾರ (ಡಿ 24)ಕ್ಕೆ ತೆರೆಕಾಣುತ್ತಿದೆ. ಸಹಜವಾಗಿಯೇ ಧನಂಜಯ್ ಎಕ್ಸೆ„ಟ್‌ಆಗಿದ್ದಾರೆ.ಅದರಲ್ಲೂ ತಮ್ಮ ಚೊಚ್ಚಲನಿರ್ಮಾಣದ “ಬಡವ ರಾಸ್ಕಲ್’ ಚಿತ್ರದಮೇಲೆ ಇನ್ನಿಲ್ಲದ ನಿರೀಕ್ಷೆಅವರದು. ಇತ್ತೀಚಗಷ್ಟೇ ಚಿತ್ರದಟ್ರೇಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ.
ಚಿತ್ರದಬಗ್ಗೆಮಾತನಾಡುವ ಧನಂಜಯ್, “ಇದೊಂದು ಮಧ್ಯಮವರ್ಗದ ಕಥೆ. ಆಗಷ್ಟೇ ವಿಧ್ಯಾಭ್ಯಾಸಮುಗಿಸಿದ ಯುವಕ ಕೆಲಸಕ್ಕಾಗಿ ಹುಡುಕುವ ಸನ್ನಿವೇಶಗಳೇ ಮುಖ್ಯ ಕಥಾವಸ್ತು. ಅಪ್ಪ-ಅಮ್ಮನ ಜೊತೆ ಮಗನ ಬಾಂಧವ್ಯವನ್ನು ಮನತಟ್ಟುವಂತೆ ನಿರ್ದೇಶಕರು ತೋರಿಸಿದ್ದಾರೆ. ಇದೇ 24 ರಂದು ಚಿತ್ರ ತೆರೆಗೆ ಬರಲಿದೆ’ಎನ್ನುತ್ತಾರೆ.
ಇದನ್ನೂ ಓದಿ:- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಜ್ಜಿ ವಿಯೋಗ
ಈ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದಾರೆ.ಚಿತ್ರದಬಗ್ಗೆ ಮಾತನಾಡುವ ನಿರ್ದೇಶಕ ಗುರು, “ನಾನುಹಾಗೂ ಧನಂಜಯ ಬಹಳದಿನಗಳ ಸ್ನೇಹಿತರು.ಡಾಲಿಗಾಗಿ ಕಥೆ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ನಾನು ನಿರ್ದೇಶನ ಮಾಡಿದರೆ, ಮೊದಲುಧನಂಜಯ್ ಅವರ ಸಿನಿಮಾಮಾಡುತ್ತೇನೆ ಅಂದುಕೊಂಡಿದೆ. ಕಥೆ ಸಿದ್ದಮಾಡಿಧನಂಜಯ ಬಳಿ ಹೇಳಿದೆ. ಅವರಿಗೆ ಇಷ್ಟವಾಯಿತು. ಈ ಚಿತ್ರದಲ್ಲಿ ನಟಿಸುವುದಷ್ಟೇ ಅಲ್ಲ. ನಿರ್ಮಾಣವನ್ನು ಮಾಡುತ್ತೇನೆ ಅಂದರು ಧನಂಜಯ.
ನಂತರ ಒಳ್ಳೆಯ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ’ಎಂದರು. ಚಿತ್ರದಲ್ಲಿಅಮೃತಾ ಅಯ್ಯಂಗಾರ್ ನಾಯಕಿ.ಈ ಚಿತ್ರದಬಿಡುಗಡೆಗೆಗಾಗಿ ಅಮೃತಾ ಎದುರು ನೋಡುತ್ತಿದ್ದಾರಂತೆ. ಇಲ್ಲಿನ ಪಾತ್ರ ಅವರಿಗೆಅಚ್ಚುಮೆಚ್ಚು.ಉಳಿದಂತೆ ಚಿತ್ರದಲ್ಲಿ ರಂಗಾಯಣರಘು, ಸ್ಪರ್ಶ ರೇಖಾ, ನಾಗಭೂಷಣ್ ನಟಿಸಿದ್ದಾರೆ.ಚಿತ್ರಕ್ಕೆವಾಸುಕಿ ವೈಭವ್ ಸಂಗೀತವಿದೆ.