Advertisement

ವರ್ತೂರು ಕೆರೆಯಲ್ಲಿ ಮತ್ತೆ ನೊರೆ!

12:49 PM May 29, 2017 | |

ಮಹದೇವಪುರ: ವಾರದಿಂದ ಸುರಿದ ಮಳೆಗೆ ವರ್ತೂರು ಕೆರೆಯಲ್ಲಿ ಮತ್ತೆ ಭಾರಿ ಪ್ರಮಾಣದ ನೊರೆ ಸೃಷ್ಟಿಯಾಗಿ ರಸ್ತೆಗೆ ಹಾರುತ್ತಿರುವುದರಿಂದ ವಾಹನ ಸವಾರರು ಹಾಗೂ ಪಾದಾಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ.

Advertisement

ನಗರದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಜೋರಾಗಿದ್ದು, ಮಳೆ ಕಾಲುವೆಗಳಲ್ಲಿ ಒಳಹರಿವು ಹೆಚ್ಚಿದೆ. ಪರಿಣಾಮ ನೊರೆ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ. ಶನಿವಾರ ರಾತ್ರಿ ಭಾರಿ ಪ್ರಮಾಣದ ನೊರೆ ಸೃಷ್ಟಿಯಾಗಿ ರಸ್ತೆ ಮೇಲೆ ಹರಡಿದ್ದರಿಂದ ರಸ್ತೆಯೇ ಕಾಣದ ಸ್ಥಿತಿ ನಿರ್ಮಾಣವಾಗಿತ್ತು.

ಎನ್‌ಜಿಟಿ ಆದೇಶದ ಬಳಿಕ ಎಚ್ಚೆತ್ತ ಬಿಡಿಎ, ನೊರೆ ರಸ್ತೆಗೆ ಹಾರದಂತೆ ವರ್ತೂರು ಕೋಡಿಯಲ್ಲಿ 20 ಅಡಿ ಎತ್ತರ ಮೆಷ್‌ ಅಳವಡಿಸೊದೆ. ಆದರೆ ಇತ್ತೀಚೆಗೆ ಬಿರುಗಾಳಿ ಬೀಸಿದಾಗ ವರ್ತೂರು ಕೊಡಿ ಬಳಿ ತಡೆಗೋಡೆ ಸಮೇತ ಮೆಷ್‌ ರಸ್ತೆಗೆ ವಾಲಿದೆ.

ಇದರಿಂದಾಗಿ ನೊರೆ ರಸ್ತೆಗೆ ಬರುತ್ತಿದ್ದು, ಅಪಘಾತ ಸಂಭವಿಸುವ ಅಪಾಯ ಎದುರಾಗಿದೆ. ಇಷ್ಟಾದರೂ ನೊರೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗದ ಅಧಿಕಾರಿಗಳ ವಿರುದ್ಧ ಜನ ತೀವ್ರ ಆಕ್ರೋಶಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next