Advertisement

ದೊಡ್ಡವರಿಗೂ ಬೇಬಿ ಪೌಡರ್‌!

07:00 AM Apr 06, 2018 | |

ಮಕ್ಕಳ ಕೋಮಲ ತ್ವಚೆಯ ಕ್ರೆಡಿಟ್ಟೆಲ್ಲ ಹೋಗೋದು ಬೇಬಿ ಪೌಡರ್‌ಗೆ. ಮುಟ್ಟಿದರೆ ಹಿತವೆನಿಸುವ, “ದೇವರೇ ಇಂಥ ತ್ವಚೆಯನ್ನೂ ನನಗೂ ಕೊಡು’ ಎಂದು ಬೇಡಿಕೊಳ್ಳುವಂತೆ ಮಾಡುವ ಮಾಂತ್ರಿಕ ಮೈಮಾಟ ಮಕ್ಕಳದ್ದು. ಪುಟಾಣಿಗಳ ಅಂದದಲ್ಲಿ ಇಷ್ಟೆಲ್ಲ ಮ್ಯಾಜಿಕ್‌ ಮಾಡುವ ಬೇಬಿಪೌಡರ್‌ನ ಬಹೂಪಯೋಗಿ ಗುಣ ನಿಮ್ಗೆ ಗೊತ್ತೇ? ಆ ಪೌಡರ್‌ ನಿಮ್ಮ ದೇಹಸಿರಿಯಲ್ಲೂ ಪವಾಡ ಸೃಷ್ಟಿಸಬಲ್ಲದು. ಅದು ಹೇಗೆ?

Advertisement

ಮೇಕಪ್‌ ಮಾಡುವಾಗ
ಮೇಕಪ್‌ ಕ್ರೀಮ್‌ಗಳಿಗೆ ದುಡ್ಡು ಚೆಲ್ಲಿ ಸಾಕಾಗಿದ್ದರೆ, ಬೇಬಿ ಪೌಡರ್‌ ಅನ್ನು ತಂದಿಟ್ಟುಕೊಳ್ಳಿ. ಮಾಮೂಲಿ ಪೌಡರ್‌ ಲೇಪಿಸಿಕೊಂಡು ಮೇಕಪ್‌ ಮಾಡಿಕೊಳ್ಳುವಾಗ ಅದಕ್ಕೆ ಸ್ವಲ್ಪ ಬೇಬಿ ಪೌಡರ್‌ ಬಳಸಿದರೆ ಮುಖ ಫ‌ಳಫ‌ಳನೆ ಹೊಳೆಯುತ್ತದೆ. ಅಲ್ಲದೇ ಪೌಡರ್‌ ಹೆಚ್ಚು ಹೊತ್ತು ಮುಖದ ಮೇಲಿರುತ್ತದೆ.

ರೆಪ್ಪೆ ದಪ್ಪವೋ ದಪ್ಪ
ಬೇಬಿ ಪೌಡರ್‌ ಬಿಳಿ ಬಣ್ಣದ್ದೇ ಆದರೂ ಕಡುಗಪ್ಪಿನ ಕಣೆಪ್ಪೆಯನ್ನೂ ಅಂದಗಾಣಿಸಬಲ್ಲುದು. ಕಣೆಪ್ಪೆಗಳಿಗೆ ಕಾಜಲ್‌ ಹಚ್ಚುವ ಮೊದಲು, ಬೇಬಿ ಪೌಡರ್‌ಲೇಪಿತ ಬ್ರಶ್‌ ಅನ್ನು ರೆಪ್ಪೆಗಳ ಮೇಲೆ ಸ್ಪರ್ಶಿಸಬೇಕು. ನಂತರ ಕಾಜಲ್‌ ಹಚ್ಚಿಕೊಳ್ಳಬೇಕು. ಆಗ ಕಂದುಗಪ್ಪು ಬಣ್ಣಕ್ಕೆ ತಿರುಗುವ ರೆಪ್ಪೆಯ ಮೇಲೆ ಎಲ್ಲರ ಕಂಗಳೂ ಬೀಳುತ್ತವೆ. ರೆಪ್ಪೆ ದಪ್ಪವಾಗಿಯೂ ಕಾಣಿಸುತ್ತದೆ.

ಡ್ರೈ ಶ್ಯಾಂಪೂ ಆಗಿ
ಡ್ರೈ ಶ್ಯಾಂಪೂವಿನಿಂದ ಏನೂ ಫ‌ಲ ಸಿಗದೇ ಇದ್ದಾಗಲೂ ಬೇಬಿ ಪೌಡರ್‌, ತಲೆಕೂದಲಿನ ಅಂದ ಹೆಚ್ಚಿಸುತ್ತದೆ. ಕೊಕೊ ಪೌಡರ್‌ ಜತೆಗೆ ಪೌಡರ್‌ ಅನ್ನು ಅತ್ಯಲ್ಪ ಪ್ರಮಾಣದಲ್ಲಿ ಬೆರೆಸಿ, ಕೂದಲಿಗೆ ಹಚ್ಚಿ ಕೊಂಡರೆ ಕೇಶಕಾಂತಿಯ ಗತ್ತೇ ಬೇರೆ. ಕೆಂಚು ಕೂದಲು ಇದ್ದವರು, ದಾಲಿನ್ನಿ ಪೌಡರ್‌ ಜತೆ ಬೇಬಿ ಪೌಡರ್‌ ಬೆರೆಸಿ, ಲೇಪಿಸಿಕೊಂಡರೆ, ಡಸ್ಟಿ ಲುಕ್ಕನ್ನು ಮಾಯವಾಗಿಸಬಹುದು.

ಸಾಕ್ಸ್‌ ಒಳಗೆ ಪೌಡರ್‌
ಧರಿಸಿದ ಶೂ ಇಲ್ಲವೇ ಸಾಕ್ಸ್‌ ನಲ್ಲಿ ಗಾಳಿಯಾಡದೆ ಇದ್ದಾಗ ಅವು ದುರ್ಗಂಧ ಬೀರುವುದು ಸಹಜ. ಇದನ್ನು ತಪ್ಪಿಸಲು ಬೇಬಿ ಪೌಡರ್‌ ಒಂದೇ ದಾರಿ. ಸಾಕ್ಸ್‌ ಧರಿಸುವ ಮುನ್ನ ಪಾದಗಳಿಗೆ ಇಲ್ಲವೇ ಸಾಕ್ಸಿನ ಒಳಭಾಗಕ್ಕೆ ಬೇಬಿ ಪೌಡರ್‌ ಉದುರಿಸಿ. ಎಷ್ಟೇ ತಾಪ ಅಧಿಕವಿದ್ದರೂ ಕಾಲು ಬೆವರುವುದಿಲ್ಲ. ಪಾದಗಳು ತಣ್ಣಗಿರುತ್ತವೆ.

Advertisement

ವ್ಯಾಕ್ಸಿಂಗ್‌ ಮಿತ್ರ
ಮನೆಯಲ್ಲಿ ವ್ಯಾಕ್ಸಿಂಗ್‌ ಮಾಡಿಕೊಳ್ಳುವವರಿಗೆ ಬೇಬಿ ಪೌಡರ್‌ ಸಖತ್‌ ಕೂಲ್‌ ಅನುಭವ ನೀಡುತ್ತೆ. ವ್ಯಾಕ್ಸಿಂಗ್‌ಗೂ ಮೊದಲು ಕಾಲಿನ ಅಥವಾ ದೇಹದ ಮೇಲೆ ಬೇಬಿ ಪೌಡರ್‌ ಉದುರಿಸಿಕೊಂಡರೆ, ಚರ್ಮಕ್ಕೆ ತಂಪು ಅನುಭವ ಸಿಗುತ್ತದೆ. ಚರ್ಮದ ಹೊಳಪೂ ಹೆಚ್ಚುತ್ತದೆ.

ಡಿಯೋಡ್ರಂಟ್‌ ಆಗುತ್ತೆ!
ಬೇರೆಲ್ಲ ಡಿಯೋಡ್ರಂಟ್‌ಗಳಿಗಿಂತ ಬೇಬಿ ಪೌಡರ್‌ ದಿನದ ಕೊನೆಯ ತನಕ ದೇಹಕ್ಕೆ ಪರಿಮಳವನ್ನು ಒದಗಿಸುತ್ತದೆ. ಕಂಕುಳಿನ ಭಾಗಕ್ಕೆ ಇಲ್ಲವೇ ಜಾಸ್ತಿ ಬೆವರುವ ಭಾಗಕ್ಕೆ ಬೇಬಿ ಪೌಡರ್‌ ಹಚಿ c ಕೊಂಡರೆ, ಆ ಭಾಗದಲ್ಲಿ ಕೀಟಾಣುಗಳ ಆಟ ನಡೆಯೋದಿಲ್ಲ.

ಬೀಚ್‌ನಲ್ಲಿ ಸ್ನಾನ ಮಾಡುವಾಗ
ಸಮುದ್ರದ ಬೀಚ್‌ನಲ್ಲಿ ಸ್ನಾನ ಮಾಡಿ ವಾಪಸಾಗುವಾಗ ಮೈತುಂಬಾ ಮರಳು ಅಂಟಿಕೊಂಡಿರುತ್ತದೆ. ಮನೆಗೆ ಬಂದಾದ ಮೇಲೂ ಮೈಮೇಲಿನ ಮರಳು ಕಿರಿಕಿರಿ ಮಾಡುತ್ತಲೇ ಇರುತ್ತೆ. ಆದರೆ, ಬೇಬಿಪೌಡರ್‌ ಅನ್ನು ಮೈಗೆ ಹಚ್ಚಿಕೊಂಡು, ಸಮುದ್ರ ಸ್ನಾನಕ್ಕೆ ಇಳಿದರೆ ಮರಳು ಜಾಸ್ತಿ ಅಂಟಿಕೊಳ್ಳುವುದಿಲ್ಲ. ಕಡಿಮೆ ಸಮಯದಲ್ಲಿ ಸುಲಭವಾಗಿ ಉದುರಿಹೋಗುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next