Advertisement

ಓಟಿಟಿ ನೋಟ: ಬೇಬಿ ಭರ್ಜರಿ ಎಂಟ್ರಿ

03:39 PM Aug 21, 2023 | Team Udayavani |

ತೆಲುಗಿನ ಸ್ಟಾರ್‌ ನಟ ವಿಜಯ ದೇವರಕೊಂಡ ಅವರ ಸಹೋದರ ಆನಂದ್‌ ದೇವರಕೊಂಡ ನಟಿಸಿರುವ “ಬೇಬಿ’ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಆ.25ರಂದು ಓಟಿಟಿಗೆ ಲಗ್ಗೆ ಇಡಲಿದೆ. ಸುಮಾರು 9 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಿಡುಗಡೆ ನಂತರ ಹಿಟ್‌ ಆಗಿ 100 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿತ್ತು. ತ್ರಿಕೋನ ಪ್ರೇಮಕಥೆಯ ಈ ಚಿತ್ರ ಈಗ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

Advertisement

ಇದಲ್ಲದೇ ದುಲ್ಕರ್‌ ಸಲ್ಮಾನ್‌ ,ರಾಜ್‌ಕುಮಾರ್‌ ರಾವ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ  “ಗನ್ಸ್‌ ಅಂಡ್‌ ಗುಲಾಬ್ಸ್’ ವೆಬ್‌ ಸೀರಿಸ್‌ ಸೇರಿದಂತೆ ಅನೇಕ ಹೊಸ ಶೋಗಳು ಓಟಿಟಿಗೆ ಲಗ್ಗೆ ಇಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next