Advertisement

Rajasthan; 6 ತಿಂಗಳ ಮಗು ಸೇರಿ ನಾಲ್ವರ ಭೀಕರ ಹತ್ಯೆ; ಕತ್ತು ಸೀಳಿ ಬೆಂಕಿ ಹಚ್ಚಲಾಗಿದೆ!

04:00 PM Jul 19, 2023 | Team Udayavani |

ಜೈಪುರ: ಜೋಧಪುರ ನಗರದಿಂದ 50 ಕಿ.ಮೀ.ದೂರದಲ್ಲಿರುವ ಓಶಿಯಾನ್ ಎಂಬ ಹಳ್ಳಿಯಲ್ಲಿ ಮಂಗಳವಾರ ರಾತ್ರಿ ಆರು ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದು ಶವಗಳಿಗೆ ಬೆಂಕಿ ಹಚ್ಚಿದ ಬೆಚ್ಚಿ ಬೀಳುವ ಘಟನೆ ನಡೆದಿದೆ. ಘಟನೆಯ ಬಳಿಕ ಶಂಕಿತ ಆರೋಪಿ ಕುಟುಂಬದ ಸಂಬಂಧಿಯಾಗಿರುವ 19 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆಘಾತಕಾರಿ ಘಟನೆ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಪ್ರತಿಪಕ್ಷ ಬಿಜೆಪಿಯಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ತವರು ಜಿಲ್ಲೆ ಜೋಧ್‌ಪುರದಲ್ಲಿ ಈ ಅಪರಾಧ ನಡೆದಿದೆ ಎಂದು ಬಿಜೆಪಿ ಒತ್ತಿ ಹೇಳಿದೆ.

ಪೊಲೀಸರ ಪ್ರಕಾರ, ಚೌರೈ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪುನರಾಮ್ (55) ಎಂಬುವವರ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಮನೆಗೆ ಪ್ರವೇಶಿಸಿದಾಗ, ಪುನರಾಮ್, ಅವರ ಪತ್ನಿ ಭನ್ವ್ರಿ (50) ಮತ್ತು ಸೊಸೆ ಧಾಪು ಅವರ ಶವಗಳು ಸುಟ್ಟ ಸ್ಥಿತಿಯಲ್ಲಿ ಅಂಗಳದಲ್ಲಿ ಕಂಡುಬಂದವು. ಧಾಪು ದೇಹದ ಪಕ್ಕದಲ್ಲಿ ಭಯಾನಕ ಸ್ಥಿತಿಯಲ್ಲಿ ಆಕೆಯ ಆರು ತಿಂಗಳ ಮಗಳ ಅವಶೇಷಗಳಿದ್ದವು. ಈ ಕುಟುಂಬದ ಆದಾಯದ ಮೂಲ ಕೃಷಿಯಾಗಿತ್ತು ಎಂದು ತಿಳಿದುಬಂದಿದೆ.

ಹಂತಕ ನಾಲ್ವರ ಕತ್ತು ಸೀಳಿ ಕೊಲೆ ಮಾಡಿ, ನಂತರ ಶವಗಳನ್ನು ಅಂಗಳಕ್ಕೆ ಎಳೆದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆಗಳು ವೈಯಕ್ತಿಕ ದ್ವೇಷದ ಪರಿಣಾಮವಾಗಿರಬಹುದು, ಅವರು ತಮ್ಮ ತನಿಖೆಯಲ್ಲಿ ಪ್ರತಿಯೊಂದು ಕೋನವನ್ನು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next