Advertisement

ಸಂಸದ ಸ್ಥಾನಕ್ಕೆ ಬಾಬುಲ್‌ ಸುಪ್ರಿಯೋ ಅಧಿಕೃತ ರಾಜೀನಾಮೆ

08:48 PM Oct 19, 2021 | Team Udayavani |

ನವದೆಹಲಿ: ಕಳೆದ ತಿಂಗಳು ಬಿಜೆಪಿ ತ್ಯಜಿಸಿ, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸೇರಿದ್ದ ಸಂಸದ ಬಾಬುಲ್‌ ಸುಪ್ರಿಯೋ ಮಂಗಳವಾರದಂದು ಸಂಸದ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.

Advertisement

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಅವರು, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. “ನಾನು ರಾಜಕೀಯ ಜೀವನವನ್ನು ಬಿಜೆಪಿ ಮೂಲಕ ಆರಂಭಿಸಿದೆ.

ನನ್ನ ಬಗ್ಗೆ ನಂಬಿಕೆಯಿಟ್ಟ ಮೋದಿ ಜೀ, ಅಮಿತ್‌ ಶಾ ಮತ್ತು ಪಕ್ಷದ ಅಧ್ಯಕ್ಷರು ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಭಾರದ ಹೃದಯದೊಂದಿಗೆ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ’ ಎಂದು ಅವರು ಹೇಳಿದ್ದಾರೆ. ರಾಜಕೀಯ ತ್ಯಜಿಸುವುದಾಗಿ ಜು. 31ರಂದು ತಿಳಿಸಿದ್ದ ಬಾಬುಲ್‌ ಅವರು, ಸೆ. 19ರಂದು ಟಿಎಂಸಿ ಸೇರಿದ್ದರು.

ಇದನ್ನೂ ಓದಿ :“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next