Advertisement

ದೇಶಕ್ಕೆ ಬಾಬೂಜಿ ಕೊಡುಗೆ ಅಪಾರ: ಕೆಂಗೇರಿ

05:45 PM Apr 06, 2022 | Team Udayavani |

ಗಜೇಂದ್ರಗಡ: ಸಮಾಜದಲ್ಲಿ ತುಳಿತಕ್ಕೊಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನ ರಾಂ ಅವರು, ದೇಶದ ಉಪ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿವೆ ಎಂದು ತಹಶೀಲ್ದಾರ್‌ ರಜನಿಕಾಂತ್‌ ಕೆಂಗೇರಿ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಡಾ|ಬಾಬು ಜಗಜೀವನರಾಂ ಅವರ 115ನೇ ಜನ್ಮದಿನೋತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಡಾ|ಬಾಬು ಜಗಜೀವನರಾಂ ಅವರು ಕೇವಲ ಒಂದು ಜಾತಿಯ ಉನ್ನತಿಗೆ ಸೀಮಿತರಾಗದೆ ಬಡವರ, ರೈತರ, ಕಾರ್ಮಿಕರ ಅಭಿವೃದ್ಧಿಗಾಗಿ ದುಡಿದ ಮಹಾನ್‌ ವ್ಯಕ್ತಿಯಾಗಿದ್ದರು. ಜೊತೆಗೆ ದೇಶದಲ್ಲಿ ಆಹಾರದ ಕೊರತೆ ಉಂಟಾದ ಸಮಯದಲ್ಲಿ ಜಾರಿಗೊಳಿಸಿದ ಯೋಜನೆಗಳು ಹಸಿರು ಕ್ರಾಂತಿಗೆ ಕಾರಣವಾದವು. ಅವರ ಸಾಮಾಜಿಕ ಕಳಕಳಿ ಹಾಗೂ ರಾಜಕೀಯ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ದಲಿತ ಸಂಘಟನೆ ಮುಖಂಡ ಶರಣು ಪೂಜಾರ ಮಾತನಾಡಿ, ಬಸವಣ್ಣ, ಬುದ್ಧರ ಅನುಯಾಯಿಗಳಾಗಿದ್ದ ಬಾಬೂಜಿ ಸತತ 45 ವರ್ಷಗಳ ಕಾಲ ರಾಜಕೀಯದಲ್ಲಿ
ಹಲವು ಇಲಾಖೆಗಳ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಬೇಸಾಯದಲ್ಲಿ ವೈಜ್ಞಾನಿಕ ಬದಲಾವಣೆಗೆ ಆದ್ಯತೆ ನೀಡಿದ್ದರು. ಬಾಬೂಜಿ ಅವರು ಕೇವಲ ರಾಜಕಾರಣಿಗಳಷ್ಟೇ ಅಲ್ಲ. ವಿದ್ಯಾರ್ಥಿ ದಿಸೆಯಿಂದಲೂ ತಮ್ಮನ್ನು ಎಲ್ಲ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ರಾಷ್ಟ್ರಕ್ಕೆ ಬಾಬೂಜಿ ಕೊಡುಗೆ ಅಪಾರ ಎಂದರು.

ಡಿ.ಜಿ.ಕಟ್ಟಿಮನಿ, ಉಮೇಶ ರಾಠೊಡ, ದುರುಗಪ್ಪ ಸಂದಿಮನಿ, ಕನಕಪ್ಪ ಅರಳಿಗಿಡದ, ರವಿ ಮಾದರ, ಶಿವು ಚವ್ಹಾಣ, ಮಾರುತಿ ಹಾದಿಮನಿ, ಅಲ್ಲಾಭಕ್ಷಿ ಮುಚ್ಚಾಲಿ, ನಿಂಗಪ್ಪ ಗುಡಿಮನಿ, ಭರತ್‌ ಹಾದಿಮನಿ, ವೀರಣ್ಣ ಅಡಗತ್ತಿ, ಎ.ಎಫ್‌. ಪಾಟೀಲ, ಎಂ.ಆರ್‌. ಷಣ್ಮಖ, ಉಮೇಶ ಅರಳಿಗಿಡದ, ಎಸ್‌.ಕೆ.ಗೌಡರ, ಗಣೇಶ ಕೊಡಕೇರಿ, ಶಾಹೀನ ಗುರಿಕಾರ, ಸಾವಿತ್ರಿ ಕುಂದಗೋಳ, ರಾಜೇಶ್ವರಿ ಶೆಟ್ಟಿ ಇನ್ನಿತರರಿದ್ದರು.

Advertisement

ಎಸ್‌.ಎಂ. ಭೂಮರಡ್ಡಿ: ಪಟ್ಟಣದ ಎಸ್‌.ಎಣಂ. ಭೂಮರಡ್ಡಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಡಾ|ಬಾಬು ಜಗಜೀವನ್‌ ರಾಂ ಅವರ 115ನೇ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಜೆ.ಜಿ. ಕುದರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಜಿ.ಬಿ. ಗುಡಿಮನಿ, ಅರವಿಂದ ವಡ್ಡರ, ಎಸ್‌.ಎಸ್‌. ವಾಲಿಕಾರ, ಜ್ಯೋತಿ ಗದಗ, ವೈ.ಆರ್‌. ಸಕ್ರೋಜಿ, ಕವಿತಾ ಕವಲೂರ, ಎಂ.ಎಸ್‌. ನಾಗರಾಳ, ಮಂಜುಳಾ ಬುವಾನವರ, ಸುನಿಲ್‌ ಬಂಡಿವಡ್ಡರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next