ತಿ.ನರಸೀಪುರ: ಕೇಂದ್ರ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದವರು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಎಂದು ಬಾಬೂಜಿ ರಾಷ್ಟ್ರೀಯ ಸಮಾತ ಆಂದೋಲನ ರಾಜಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹೇಳಿದರು
.
ಪಟ್ಟಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಬಾಬೂಜಿ 111ನೇ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸ್ವಾತಂತ್ರ್ಯ ನಂತರ ದೇಶದಲ್ಲಿ ಆಹಾರದ ಸಮಸ್ಯೆ ವ್ಯಾಪಕವಾಗಿತ್ತು. ಕೇಂದ್ರದಲ್ಲಿ ಕೃಷಿ ಖಾತೆ ಹೊಂದಿದ್ದ ಬಾಬೂಜಿ ಹಸಿರುಕ್ರಾಂತಿ ಮಾಡಿ ಆಹಾರದ ಸಮಸ್ಯೆ ನೀಗಿಸಿದರು. ನಾಲ್ಕು ದಶಕಗಳ ಕಾಲ ಕೇಂದ್ರ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದರು ಎಂದು ಹೇಳಿದರು.
ಬಾಲ್ಯದಲ್ಲಿಯೇ ಹೋರಾಟದ ಕಿಚ್ಚು: ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಮಾತನಾಡಿ, ಜಾತಿ ವ್ಯವಸ್ಥೆ ವಿರುದ್ಧ ಡಾ.ಬಾಬು ಜಗಜೀವನ್‌ರಾಂ ಬಾಲ್ಯದಲ್ಲಿಯೇ ಹೋರಾಟ ಕಿಚ್ಚನ್ನು ಹೊಂದಿದ್ದರು. ರಕ್ಷಣಾ ಸಚಿವರಾಗಿ ಚೀನಾದ ವಿರುದ್ಧದ ಯುದ್ಧವನ್ನು ಗೆದ್ದಂತಹ ಬಾಬೂಜಿಗೆ ಭಾರತ ರತ್ನವನ್ನು ಅಂದಿನ ಕೇಂದ್ರ ಸರ್ಕಾರ ನೀಡಲಿಲ್ಲ.
ಬಿಜೆಪಿ ಅಂದೇ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಪ್ರಯತ್ನ ಮಾಡಿತ್ತಾದರೂ ಕೆಲವು ಶಕ್ತಿಗಳು ಬಿಡಲಿಲ್ಲ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಜಿಪಂ ಮಾಜಿ ಸದಸ್ಯ ಪುಟ್ಟಬಸವಯ್ಯ, ಪುರಸಭೆ ಉಪಾಧ್ಯಕ್ಷೆ ರತ್ನಮ್ಮ, ಪ್ರಧಾನ ಕಾರ್ಯದರ್ಶಿ ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಟೌನ್ ಅಧ್ಯಕ್ಷ ಬಿ.ವೀರಭದ್ರಪ್ಪ,
ಹಿಂ.ವರ್ಗಗಳ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ, ಬಾಬೂಜಿ ಸಂಘದ ಅಧ್ಯಕ್ಷ ಮೂಗೂರು ಸಿದ್ದರಾಜು, ಯುವ ಮೋರ್ಚಾ ಅಧ್ಯಕ್ಷ ಮಣಿಕಂಠರಾಜ್‌ಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಟಿ.ಬೆಟ್ಟಹಳ್ಳಿ ನಂಜಮ್ಮಣ್ಣಿ, ಉಮಾ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಡವಾಡಿ ಮಹೇಶ್, ಮುಖಂಡರಾದ ತೋಟದಪ್ಪ ಬಸವರಾಜು, ನಾಗರಾಜು(ತಾತ), ಗೌಡ್ರು ಪ್ರಕಾಶ್, ರಾಮಸ್ವಾಮಿ, ಎಸ್.ದಿಲೀಪ, ಡಿ.ಶಿವಕುಮಾರ್, ವೀರಪ್ಪಓಡೆಯಹುಂಡಿ ರಮೇಶ ಇದ್ದರು.